Connect with us

Dvgsuddi Kannada | online news portal | Kannada news online

ಬೆಟ್ಟಿಂಗ್ ಉತ್ತೇಜಿಸುವ ಆನ್ ಲೈನ್ ಗೇಮ್ ನಿಷೇಧಿಸಿದ ತಮಿಳುನಾಡು ಸರ್ಕಾರ

ರಾಷ್ಟ್ರ ಸುದ್ದಿ

ಬೆಟ್ಟಿಂಗ್ ಉತ್ತೇಜಿಸುವ ಆನ್ ಲೈನ್ ಗೇಮ್ ನಿಷೇಧಿಸಿದ ತಮಿಳುನಾಡು ಸರ್ಕಾರ

ಚೆನ್ನೈ : ಬೆಟ್ಟಿಂಗ್ ಉತ್ತೇಜಿಸುವ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

ಯುವ ಸಮೂಹ ಬೆಟ್ಟಿಂಗ್ ಆನ್ ಲೈನ್ ಗೇಮ್ ಗಳಿಗೆ ದಾಸರಾಗಿದ್ದು, ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ  ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ಈ ಸುಗ್ರೀವಾಜ್ಞೆ ಹೊರಡಿಸಿದ್ದು, ಗೇಮಿಂಗ್ ಕಾಯ್ದೆ 1930, ಚೆನ್ನೈ ನಗರ ಪೊಲೀಸ್ ಕಾಯ್ದೆ- 1888, ಚೆನ್ನೈ ಜಿಲ್ಲಾ ಪೊಲೀಸ್ ಕಾಯ್ದೆ-1859 ಗಳಿಗೆ ತಿದ್ದುಪಡಿ ಮಾಡಿ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಆನ್ ಲೈನ್ ಬೆಟ್ಟಿಂಗ್ ಗೇಮ್ ಆಡುವವರಿಗೆ 5000 ರೂ. ದಂಡ , 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಅಂಗಡಿಗಳಲ್ಲಿ ಗೇಮ್ ಆಡಿಸುವವರಿಗೆ 10000 ರೂ. ದಂಡ , 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಬೆಟ್ಟಿಂಗ್ ಗೆದ್ದವರಿಗೆ ನಗದು ನೀಡಲು ಆನ್ ಲೈನ್ ಮೂಲಕ ಹಣ ಪಡೆಯುವುದು ಮತ್ತು ನೀಡುವುದನ್ನೂ ನಿಷೇಧಿಸಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});