Connect with us

Dvgsuddi Kannada | online news portal | Kannada news online

ಕೃಷಿ ಮಸೂದೆ:  ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

ರಾಷ್ಟ್ರ ಸುದ್ದಿ

ಕೃಷಿ ಮಸೂದೆ:  ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

ನವದೆಹಲಿ: ಕೃಷಿ ಮಸೂದೆ ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ  ಪ್ರಧಾನಮಂತ್ರಿ ನರೇಂದ್ರ ಮೋದಿ ಹರಿಹಾಯ್ದರು. ದೇಶ ಸುಧಾರಣಾ ಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಬೆಂಬಲದಿಂದ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ. ಈ ಮೂಲಕ ಕೃಷಿ ಮಸೂದೆಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಸ್ವಾಮಿತ್ವ ಯೋಜನೆಯಡಿ ಆಸ್ತಿ ಹಕ್ಕು ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸರ್ಕಾರ ತಂದಿರುವ ಸುಧಾರಣಾ ಕ್ರಮಗಳನ್ನು ವಿರೋಧಿಸುತ್ತಿರುವವರನ್ನು ಕೃಷಿಕರು ಬೆಂಬಲಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಗ್ರಾಮಗಳು, ಗ್ರಾಮೀಣ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಹಿಂದಿನ ಆರು ದಶಕಗಳಲ್ಲಿ ಇಷ್ಟು ಕೆಲಸ ಆಗಿರಲಿಲ್ಲ ಎಂದರು.

ಬ್ಯಾಂಕ್ ಖಾತೆ ತೆರೆದಿರುವುದು, ಶೌಚಾಲಯಗಳು ಮತ್ತು ಮನೆಗಳ ನಿರ್ಮಾಣ, ಅಡುಗೆ ಅನಿಲ ಯೋಜನೆ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಕಾರ್ಯ ಮಾಡಲಾಗಿದೆ. ಈ ಮೊದಲು ದೇಶದಲ್ಲಿ ಆಡಳಿತ ನಡೆಸಿದವರು ಗ್ರಾಮೀಣ ಭಾರತವನ್ನು ಮರೆತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top