Connect with us

Dvg Suddi-Kannada News

ಹಳೆಯ ಕಾರುಗಳನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಸರ್ಕಾರದಿಂದ ವಿಶೇಷ ರಿಯಾಯಿತಿ: ನಿತಿನ್ ಗಡ್ಕರಿ

ಪ್ರಮುಖ ಸುದ್ದಿ

ಹಳೆಯ ಕಾರುಗಳನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಸರ್ಕಾರದಿಂದ ವಿಶೇಷ ರಿಯಾಯಿತಿ: ನಿತಿನ್ ಗಡ್ಕರಿ

ನವದೆಹಲಿ: ಹಳೆಯ ಕಾರನ್ನು ಗುಜ​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕ​ರಿಗೆ ನೂತನ ವಾಹನ ಖರೀದಿ ನೀತಿಯಡಿ, ಶೇ.5ರಷ್ಟು ರಿಯಾಯಿತಿ ಸಿಗ​ಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿ​ಸಿ​ದ್ದಾರೆ.

ಈ ಬಗ್ಗೆ ಮಾತ​ನಾ​ಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರು, ‘2021-22ನೇ ಬಜೆ​ಟ್‌​ನಲ್ಲಿ ಘೋಷಿ​ಸ​ಲಾ​ದಂತೆ ಹಳೇ ವಾಹ​ನ​ಗ​ಳನ್ನು ಗುಜ​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕರಿಗೆ ವಾಹನ ಉತ್ಪಾ​ದಕ ಕಂಪ​ನಿ​ಗಳು ಶೇ.5ರಷ್ಟು ರಿಯಾ​ಯಿತಿ ನೀಡ​ಲಿ​ವೆ’ ಎಂದು ಹೇಳಿ​ದರು.

20 ವರ್ಷದ ಹಳೆ​ಯ​ದಾದ ವೈಯ​ಕ್ತಿಕ ವಾಹ​ನ​ಗಳು ಮತ್ತು 15 ವರ್ಷ ಪೂರೈ​ಸಿದ ಸರ​ಕು-ಸಾಗ​ಣೆ ವಾಹ​ನ​ಗಳನ್ನು ಗುಜ​ರಿಗೆ ಹಾಕು​ವ​ವ​ರಿಗೆ ರಿಯಾಯ್ತಿ ನೀಡುವ ನೀತಿ​ಯೊಂದನ್ನು 2021-22ರ ಬಜೆ​ಟ್‌​ನಲ್ಲಿ ಘೋಷಿ​ಸ​ಲಾ​ಗಿದೆ.ಆದರೆ ಆರಂಭದಲ್ಲಿ ಈ ನೀತಿಯನ್ನು ಸರ್ಕಾರಿ ವಾಹನಗಳಿಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ನಂತರದಲ್ಲಿ ಇದನ್ನು ಜನಸಾಮನ್ಯರಿಗೂ ವಿಸ್ತರಣೆ ಮಾಡಲಿದೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top