ನವದೆಹಲಿ: ಹಳೆಯ ಕಾರನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ನೂತನ ವಾಹನ ಖರೀದಿ ನೀತಿಯಡಿ, ಶೇ.5ರಷ್ಟು ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರು, ‘2021-22ನೇ ಬಜೆಟ್ನಲ್ಲಿ ಘೋಷಿಸಲಾದಂತೆ ಹಳೇ ವಾಹನಗಳನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ವಾಹನ ಉತ್ಪಾದಕ ಕಂಪನಿಗಳು ಶೇ.5ರಷ್ಟು ರಿಯಾಯಿತಿ ನೀಡಲಿವೆ’ ಎಂದು ಹೇಳಿದರು.
20 ವರ್ಷದ ಹಳೆಯದಾದ ವೈಯಕ್ತಿಕ ವಾಹನಗಳು ಮತ್ತು 15 ವರ್ಷ ಪೂರೈಸಿದ ಸರಕು-ಸಾಗಣೆ ವಾಹನಗಳನ್ನು ಗುಜರಿಗೆ ಹಾಕುವವರಿಗೆ ರಿಯಾಯ್ತಿ ನೀಡುವ ನೀತಿಯೊಂದನ್ನು 2021-22ರ ಬಜೆಟ್ನಲ್ಲಿ ಘೋಷಿಸಲಾಗಿದೆ.ಆದರೆ ಆರಂಭದಲ್ಲಿ ಈ ನೀತಿಯನ್ನು ಸರ್ಕಾರಿ ವಾಹನಗಳಿಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ನಂತರದಲ್ಲಿ ಇದನ್ನು ಜನಸಾಮನ್ಯರಿಗೂ ವಿಸ್ತರಣೆ ಮಾಡಲಿದೆ.