Connect with us

Dvgsuddi Kannada | online news portal | Kannada news online

ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ

ಪ್ರಮುಖ ಸುದ್ದಿ

ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ

ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಕಟ್ಟಡಕ್ಕೆ ಶಿಲಾನ್ಯಾಸ, ಭೂಮಿಪೂಜೆಯನ್ನು ನೆರವೇರಿಸಿದರು. 971 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವಂತ ನೂತನ ಸಂಸತ್ ಭವನದ ಕಟ್ಟಡದಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ಸಾಮರ್ಥ್ಯಹೊಂದಿದೆ

ಶೃಂಗೇರಿ ಮಠದ ಜಗದ್ಗುರು ಭಾರತೀ ತೀರ್ಥ ಪುರೋಹಿತರಿಂದ ಮೊದಲು ಗುರು ಪ್ರಾರ್ಥನೆ, ಗಣಪತಿ ಪೂಜೆ ಹಾಗೂ ಪುಣ್ಯಾಹ ವಾಚನ ಮಾಡಲಾಯಿತು. ಈ ಬಳಿಕ ದೇಶದ ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ಹಾಗೂ ಗುದ್ದಲಿ ಭೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು. ಇಂತಹ ನೂತನ ಸಂಸತ್ ಭವನ ಆಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ.

  •  ಈ ಕಟ್ಟಡವು ಲೋಕಸಭೆಯ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ಸಾಮರ್ಥ್ಯಹೊಂದಿದ್ದು, ಪ್ರಸ್ತುತ 543 ಸದಸ್ಯರು ಮತ್ತು 245 ಸದಸ್ಯರಿದ್ದಾರೆ.
  • ಲೋಕಸಭೆಯ ಅಧಿವೇಶನವು ಜಂಟಿ ಅಧಿವೇಶನಗಳಿಗೆ 1,224 ಸ್ಥಾನಗಳನ್ನು ಹಿಡಿಸುವಂತ ಸಾಮರ್ಥ್ಯ ಹೊಂದಿದೆ.
  • ಈ ಹೊಸ ಕಟ್ಟಡವು ಹಿಂದಿನದಕ್ಕಿಂತ 17,000 ಚದರ ಮೀಟರ್ ದೊಡ್ಡದಾಗಿದ್ದು, ಭೂಕಂಪನಿರೋಧಕವಾಗಿರುತ್ತದೆ.
  • ಹೊಸ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕಾಗಿ 971 ಕೋಟಿ ರೂ ಖರ್ಚು ಆಗಲಿದೆ.
  • ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರು, ಸಂಸತ್ ಸದಸ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶವನ್ನು ಹೊಂದಿರುವ ನಾಲ್ಕು ಮಹಡಿಗಳನ್ನು ಹೊಂದಿರುವ ಒಂದು ಹೊಸ ಸೆಂಟ್ರಲ್ ಮತ್ತು ಪಾರ್ಲಿಮೆಂಟ್ ಕಟ್ಟಡವನ್ನು ನಿರ್ಮಿಸುವ ಗುತ್ತಿಗೆಯನ್ನು ಎಚ್ ಸಿಪಿ ವಿನ್ಯಾಸ, ಯೋಜನೆ ಮತ್ತು ನಿರ್ವಹಣೆ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿದೆ.
  •  ಹೊಸ ಕಟ್ಟಡದಲ್ಲಿ ಕಾಗದರಹಿತ ಕಚೇರಿಯನ್ನು ನಿರ್ಮಿಸಲು ಡಿಜಿಟಲ್ ಇಂಟರ್ ಫೇಸ್ ಗಳನ್ನು ಅಳವಡಿಸಲಾಗುತ್ತಿದೆ.
  • ಹೊಸ ಕಟ್ಟಡದಲ್ಲಿ ಮೂಲ ಸಂವಿಧಾನವನ್ನು ಪ್ರದರ್ಶಿಸಲು ಸಂವಿಧಾನ ಭವನವನ್ನು ಹೊಂದಿರಲಿದೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});