Connect with us

Dvgsuddi Kannada | online news portal | Kannada news online

ರಾಮ ಮಂದಿರ ನಿರ್ಮಾಣಕ್ಕೆ1ಕೋಟಿ ದೇಣಿಗೆ ನೀಡಿದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್

ರಾಷ್ಟ್ರ ಸುದ್ದಿ

ರಾಮ ಮಂದಿರ ನಿರ್ಮಾಣಕ್ಕೆ1ಕೋಟಿ ದೇಣಿಗೆ ನೀಡಿದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್

ನವದೆಹಲಿ:  ಆಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಸಂಸದ ಹಾಗೂ ಕ್ರಿಕೆಟರ್  ಗೌತಮ್ ಗಂಭೀರ್ ಅವರು ಒಂದು ಕೋಟಿ ರು ದೇಣಿಗೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್,  ರಾಮ ಮಂದಿರ ನಿರ್ಮಾಣ ಎಂಬುದು ಭಾರತೀಯರ ಕನಸಾಗಿತ್ತು ಎಂದಿದ್ದಾರೆ. ಕೊನೆಗೂ ರಾಮ ಜನ್ಮ ಭೂಮಿ ವಿವಾದ ಬಗೆ ಹರಿದಿದ್ದು, ಭವ್ಯ ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗಲಿದೆ. ಭಾರತದ ಐಕ್ಯತೆ ಹಾಗೂ ಸಮಗ್ರತೆಯ ಪ್ರತೀಕವಾದ ಈ ಮಂದಿರಕ್ಕೆ ನಮ್ಮ ಕೈಲಾಗುವ ಸಣ್ಣ ಸಹಾಯವನ್ನು ನೀಡಬೇಕಿದೆ’ ಎಂದು ಗಂಭೀರ್ ಹೇಳಿದ್ದಾರೆ.

ವಿಶ್ವಹಿಂದೂಪರಿಷತ್, ಆರೆಸ್ಸೆಸ್ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಫೆಬ್ರವರಿ 1ರಿಂದ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});