ನವದೆಹಲಿ: ದೀಪಾವಳಿ ಹಬ್ಬದ ದಿನವೇ ಗ್ರಾಹಕರಿಗೆ ತೈಲ ಕಂಪನಿಗಳು ಶಾಕ್ ನೀಡಿವೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು 62 ರೂ. ಹೆಚ್ಚಿಸಿವೆ. ವಾಣಿಜ್ಯ ಸಿಲಿಂಡ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದ್ದು, ಹೋಟೆಲ್ ಗಳು ನೇರವಾಗಿ ಗ್ರಾಹಕರ ಮೇಲೆ ದರ ಏರಕೆ ಬರೆ ಹಾಕಲಿದ್ದಾರೆ. ಸದ್ಯ, ಜನಸಾಮಾನ್ಯರು ಬಳಸುವ 14 ಕೆಜಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.
ಹೊಸ ದರಗಳು ಇಂದಿನಿಂದ (ನವೆಂಬರ್ 1) ಜಾರಿಗೆ ಬಂದಿದೆ. ಈ ತಿಂಗಳು ಪೂರ್ತಿ ಇದೇ ದರ ಮುಂದುವರಿಯುತ್ತದೆ. ವಾಣಿಜ್ಯ ಸಿಲಿಂಡರ್ ದರ ಏರಿಕೆ ನಂತರ ದೆಹಲಿ – 1802 ರೂ, ಕೋಲ್ಕತ್ತಾ – 1911.50 ರೂ, ಮುಂಬೈ – 1754.50 ರೂ,ಚೆನ್ನೈ – 1964.50 ರೂ,ಬೆಂಗಳೂರು- 1,879.00 ರೂ ಇದೆ.