ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. 18 ಮಂದಿಯ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ, ರೋಹಿತ್ ಉಪನಾಯಕನಾಗಿರಲಿದ್ದಾರೆ. ಯುವ ಬೌಲರ್ ಕನ್ನಡಿಗ ಪ್ರಸಿದ್ ಕೃಷ್ಣ ಆಯ್ಕೆಯಾಗಿದ್ದಾರೆ.
ಐಪಿಎಲ್ ನಲ್ಲಿ ಕೆಕೆಆರ್ ಪರ ಆಡುವ ವೇಗಿ ಪ್ರಸಿದ್ ಕೃಷ್ಣ ತಂಡಕ್ಕೆ ಆಯ್ಕೆಯಾಗಿದ್ದು, ಇವರ ಜೊತೆ ಸ್ಪಿನ್ನರ್ ಕೃನಾಲ್ ಪಾಂಡ್ಯ ಏಕದಿನ ತಂಡದಲ್ಲಿ ಅವಕಾಶ ನೀಡಲಾಗಿದೆ. ವೇಗಿ ಭುನವೇಶ್ವರ್ ಕುಮಾರ್, ನಟರಾಜನ್ ಮತ್ತೆ ಏಕದಿನ ತಂಡ ಸೇರಲಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ ಮಿಂಚಿದ ಸೂರ್ಯಕುಮಾರ್ ಯಾದವ್ ರನ್ನೂ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇಶಾನ್ ಕಿಶಾನ್ ರನ್ನು ಕೈ ಬಿಡಲಾಗಿದೆ.
ರಿಷಭ್ ಪಂತ್ ಮೊದಲ ಆಯ್ಕೆಯ ಕೀಪರ್ ಆದರೆ, ಕನ್ನಡಿಗ ಕೆ.ಎಲ್.ರಾಹುಲ್ ದ್ವಿತೀಯ ಆಯ್ಕೆಯ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಮೊದಲ ಪಂದ್ಯ ಮಾ.23, ಎರಡನೇ ಪಂದ್ಯ ಮಾ.26 ಮತ್ತು ಮೂರನೇ ಪಂದ್ಯ ಮಾ.28ರಂದು ನಡೆಯಲಿದೆ. ಮೂರು ಪಂದ್ಯಗಳು ಸಹ ಪುಣೆಯಲ್ಲಿ ನಡೆಯಿದೆ.
ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ , ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ , ಕೆ.ಎಲ್. ರಾಹುಲ್ , ಯುಜುವೇಂದ್ರ ಚಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ,ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದುಲ್ ಠಾಕೂರ್.



