Connect with us

Dvgsuddi Kannada | online news portal | Kannada news online

ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವರಿಗೆ  ಪಾಸಿಟಿವ್​..!

ರಾಷ್ಟ್ರ ಸುದ್ದಿ

ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವರಿಗೆ  ಪಾಸಿಟಿವ್​..!

ಚಂಡೀಗಢ: ಕೊರೊನಾ ಲಸಿಕೆ ಕೋವಾಕ್ಸಿನ್​​ ಪ್ರಾಯೋಗಿವಾಗಿ  ಪಡೆದುಕೊಂಡಿದ್ದ  ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್ ಅವರಿಗೆ ಕೋವಿಡ್​-19 ಪಾಸಿಟಿವ್​ ಪತ್ತೆಯಾಗಿದೆ.​​ ನವೆಂಬರ್​ 20ರಂದು ವಿಜ್​ ಅವರು ಕರೊನಾ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಈ  ಟ್ವೀಟ್​ ಮೂಲಕ ಕೋವಿಡ್​ ಪಾಸಿಟಿವ್​ ಆಗಿರುವುದನ್ನು ವಿಜ್​ ಅವರು ಖಚಿತಪಡಿಸಿದ್ದಾರೆ.

ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ನವೆಂಬರ್​ 20ರಂದು ಕೋವಾಕ್ಸಿನ್​ ಹೆಸರಿನ ಕೋವಿಡ್​ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ವಿಜ್​ ಅವರು ಸಂಭವನೀಯ ಕರೊನಾ ಲಸಿಕೆ ಕೋವಾಕ್ಸಿನ್​ನ ಮೂರನೇ ಹಂತದ ಪ್ರಯೋಗದ ಮೊದಲ ಪ್ರಯೋಗಕ್ಕೆ ಒಳಗಾಗಿದ್ದರು.

​ಕೊರೊನಾ ವಿರುದ್ಧ ಕೋವಾಕ್ಸಿನ್​ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗಿತ್ತು.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್​ ಬಯೋಟೆಕ್​ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ.ಕೋವಾಕ್ಸಿನ್​ ಲಸಿಕೆ ಮೂರನೇ ಹಂತ ಪ್ರಯೋಗದಲ್ಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top