Connect with us

Dvgsuddi Kannada | online news portal | Kannada news online

ದಾವಣಗೆರೆ : ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ದಾವಣಗೆರೆ

ದಾವಣಗೆರೆ : ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ : ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಗೆ  ನಾಳೆ (ಅ.28)  ಮತದಾನ ನಡೆಯಲಿದ್ದು, ಈ ಸಂಬಂಧ ಮಹಾನಗರಪಾಲಿಕೆ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಸೆಂಟರ್‍ಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಭೇಟಿ ನೀಡಿದ್ದರು.

ಈ ವೇಳೆ ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿಗಳು ನಡೆಸುತ್ತಿದ್ದ ಸಿದ್ದತೆಯನ್ನು ಪರಿಶೀಲಿಸಿದರು., ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿ ಒಟ್ಟು 29 ಮತಗಟ್ಟೆ ಕೇಂದ್ರಗಳಿವೆ. 12819 ಪುರುಷರು ಹಾಗೂ 8143 ಮಹಿಳೆಯರು ಸೇರಿದಂತೆ ಒಟ್ಟು 20962 ಮತದಾರರು ಇದ್ದಾರೆ.

ಪದವೀಧರ ಕ್ಷೇತ್ರ ದಾವಣಗೆರೆ ನಗರದಲ್ಲಿ 17 ಮತಗಟ್ಟೆ, 7439 ಪುರುಷರು ಹಾಗೂ 5429 ಮಹಿಳೆಯರು ಸೇರಿದಂತೆ ಒಟ್ಟು 12868 ಮತದಾರರು ಇದ್ದಾರೆ. ಹಾಗೂ ದಾವಣಗೆರೆ ಗ್ರಾಮಾಂತರದಲ್ಲಿ 4 ಮತಗಟ್ಟೆ ಕೆಂದ್ರಗಳಿದ್ದು, 1412 ಪುರುಷರು ಹಾಗೂ 664 ಮಹಿಳೆಯರು ಸೇರಿದಂತೆ ಒಟ್ಟು 2076 ಮತದಾರರು ಇದ್ದಾರೆ.

ಹರಿಹರದಲ್ಲಿ 4 ಮತಗಟ್ಟೆ ಕೇಂದ್ರಗಳಿದ್ದು, 2558 ಪುರುಷರು ಹಾಗೂ 1516 ಮಹಿಳೆಯರು ಸೇರಿದಂತೆ ಒಟ್ಟು 4074 ಮತದಾರರು. ಜಗಳೂರು ತಾಲ್ಲೂಕಿನಲ್ಲಿ 3 ಮತಗಟ್ಟೆ ಕೇಂದ್ರ, 1410 ಪುರುಷರು ಹಾಗೂ 534 ಮಹಿಳೆಯರು ಸೇರಿದಂತೆ ಒಟ್ಟು 1944 ಮತದಾರರು ಇದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});