ದಾವಣಗೆರೆ: ಕೋವಿಡ್ ಸಮಯದಲ್ಲಿಯೇ ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಲ್ಲ. ಅವರ ಬೇಡಿಕೆ ಈಡೇರೊದು ಕಷ್ಟ. ಹೀಗಾಗಿ ಕೂಡಲೇ ಮುಷ್ಕರ ನಿಲ್ಲಿಸಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಜೆಟ್ನಲ್ಲಿ ಶೇ.56 ರಷ್ಟು ಹಣ ಸರ್ಕಾರಿ ನೌಕಕರಿಗೆ ನೀಡುತ್ತಿದ್ದು, ಉಳಿದ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕೋವಿಡ್ ಸಮಯದಲ್ಲಿಯೇ ಈ ರೀತಿ ಮಾಡುವುದು ಸರಿಯಲ್ಲ. ಈ ಮುಷ್ಕರದಿಂದ ನಿಮಗೂ ತೊಂದರೆ, ಜನರಿಗೂ ತೊಂದರೆ ಎಂದು ಸಾರಿಗೆ ನೌಕರರಿಗೆ ಮನವಿ ಮಾಡಿದರು.



