ದಾವಣಗೆರೆ: ಆಶ್ವೀಜ ಕಾರ್ತೀಕ ಮಾಸದಲ್ಲಿ ಕರೊನಾ ಸೋಂಕು ಉಲ್ಬಣವಾಗುತ್ತೆ ಎಂದಿದ್ದೆ. ಇದೀಗ ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಶಾಲಾ-ಕಾಲೇಜಗಳು ಪುನರ್ ಆರಂಭವಾದರೂ ಮತ್ತೆ ಮುಚ್ಚಲಿವೆ. ಕರೊನಾ ಎರಡನೇ ಹಂತದಲ್ಲಿ ಪರಿವರ್ತನೆಯಾಗಲಿದೆ. ಅದು ಮಾನಸಿಕ ಕ್ಷೋಭೆಯಿಂದ ಬರಲಿದೆ, ಸಾವು ತರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು
ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮಹಾಮಾರಿ ಕರೊನಾ ಸೋಂಕು, ರಾಜ್ಯ ರಾಜಕೀಯ ಬಗ್ಗೆ ಭವಿಷ್ಯ ಹೇಳಿದ್ದಾರೆ.
ಉತ್ತರ ಕರ್ನಾಟಕ ಜಲಪ್ರಳಯ ಆಗುತ್ತೆ ಎಂದು ಭವಿಷ್ಯ ಹೇಳಿದ್ದೆವು. ಅದು ಸತ್ಯವಾಗಿದೆ. ಡಿಸೆಂಬರ್ವರೆಗೆ ಅಂಥ ಪ್ರಸಂಗಗಳು ಇವೆ. ಮನುಷ್ಯ ಎಲ್ಲ ಮರೆತ್ತಿದ್ದಾನೆ. ದುಡ್ಡು ದೊಡ್ಡಪ್ಪ ಆಗಿದೆ, ತತ್ವಗಳಿಗೆ ಬೆಲೆ ಇಲ್ಲದಂತಾಗಿದೆ. ಸತ್ಯ ಸತ್ತು ಹೋಗಿದೆ, ಜನರು ಮೋಸದಲ್ಲಿ ತೊಡಗಿದ್ದಾರೆ. ಗ್ರಹಣದ ಹಿನ್ನೆಲೆ ರಾಜ್ಯ ರಾಜಕೀಯ ವಿಪ್ಲವವಾಗಲಿದೆ. ರಾಜ್ಯ ರಾಜಕಾರಣದಲ್ಲಿ ಏರಿಳಿತ- ಅಶಾಂತಿ ಕಾಣಲಿದೆ ಎಂದು ಶ್ರೀಗಳು ಹೇಳಿದರು. ಇನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿ ಪೂರ್ಣಗೊಳಿಸುತ್ತಾರಾ? ಎಂಬ ಪ್ರಶ್ನೆಗೆ ಶ್ರೀಗಳು ಪ್ರತಿಕ್ರಿಯೆ ನೀಡಿಲ್ಲ.



