Connect with us

Dvgsuddi Kannada | online news portal | Kannada news online

KGF 2 ಟ್ರೈಲರ್ : ರಾಕಿಂಗ್ ಸ್ಟಾರ್ ಗೆ ಶಾಕ್ ನೀಡಿದ ಆರೋಗ್ಯ ಇಲಾಖೆ..!

ಸಿನಿಮಾ

KGF 2 ಟ್ರೈಲರ್ : ರಾಕಿಂಗ್ ಸ್ಟಾರ್ ಗೆ ಶಾಕ್ ನೀಡಿದ ಆರೋಗ್ಯ ಇಲಾಖೆ..!

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ 2 ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಕಿಂಗ್ ಸ್ಟಾರ್ ಯಶ್ ಗೆ ಶಾಕ್ ನೀಡಿದೆ.

ಯೂಟ್ಯೂಬ್‌ ನಲ್ಲಿ ಅತ್ಯಧಿಕ ವೀಕ್ಷಣೆ ಪಡೆಯುವ ಮೂಲಕ ದಾಖಲೆ ಕೆಜಿಎಫ್ 2 ಟ್ರೈಲರ್ ಗೆ ಈಗ ಕಂಟಕ ಶುರುವಾಗಿದೆ. ಟ್ರೈಲರ್ ನಲ್ಲಿ ನಟ ಯಶ್ ಬಂದೂಕಿನಿಂದ ಸಿಗರೇಟ್​ ಹಚ್ಚಿರುವ ದೃಶ್ಯ ಭರ್ಜರಿ ಫೇಮಸ್ ಆದ ಬೆನ್ನಲ್ಲೇ, ಈ ದೃಶ್ಯವನ್ನು ತೆಗೆಯಿರಿ ಎಂದು ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಿದೆ.

ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ‘ ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ಆದಷ್ಟು ಸಿಗರೇಟ್​ ಸೇದುವ ದೃಶ್ಯಗಳನ್ನು ತೋರಿಸಬಾರದು. ಜನರು ನಟನನ್ನ ಅನುಕರಿಸುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ದೃಶ್ಯಗಳು ಇರಬೇಕು ಹೊರತು, ಇಂಥದ್ದನ್ನೆಲ್ಲ ತೋರಿಸಬಾರದು’ ಎಂದು ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಸಿನಿಮಾ

To Top
(adsbygoogle = window.adsbygoogle || []).push({});