Connect with us

Dvgsuddi Kannada | online news portal | Kannada news online

430 ಶಿಕ್ಷಕರ ನೇಮಕಕ್ಕೆ ಅರ್ಥಿಕ ಇಲಾಖೆ ಒಪ್ಪಿಗೆ; ಸಚಿವ ಎಸ್.‌ಸುರೇಶ್ ಕುಮಾರ್

ಪ್ರಮುಖ ಸುದ್ದಿ

430 ಶಿಕ್ಷಕರ ನೇಮಕಕ್ಕೆ ಅರ್ಥಿಕ ಇಲಾಖೆ ಒಪ್ಪಿಗೆ; ಸಚಿವ ಎಸ್.‌ಸುರೇಶ್ ಕುಮಾರ್

ಬೆಂಗಳೂರು: 2015ರ ಡಿಸೆಂಬರ್‌ 31ಕ್ಕೆ ನಿವೃತ್ತಿ, ಮರಣ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿಯಾಗಿದ್ದ ಅನುದಾನಿತ ಪದವಿಪೂರ್ವ ಕಾಲೇಜುಗಳ 173 ಉಪನ್ಯಾಸಕರು ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 257 ಶಿಕ್ಷಕರ ಹುದ್ದೆ ಸೇರಿ ಒಟ್ಟು 430 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ಈ ಹಿಂದೆಯೇ ಅನುದಾನಿತ ಪದವಿಪೂರ್ವ ಕಾಲೇಜುಗಳ 173 ಉಪನ್ಯಾಸಕರ ಹುದ್ದೆ ಭರಮರ್ತಿಗೆ ಅನುಮೋದನೆ ದೊರಕಿತ್ತು. ಆದರೆ, ಇಲಾಖೆಯ ಹಂತದಲ್ಲೇ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಾಗಿದ್ದ 257 ಶಿಕ್ಷಕರ ಹುದ್ದೆಗಳ ಭರ್ತಿಗೂ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಹಣಕಾಸು ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪುನಃ ಈ ಎರಡೂ ಪ್ರಕರಣಗಳಲ್ಲಿ ನೇಮಕಾತಿಗೆ ಅನುಮತಿ ಕೋರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಮುಖ್ಯಮಂತ್ರಿಯವರು ಅದನ್ನು ಅನುಮೋದಿಸಿದ್ದರು.

173 ಉಪನ್ಯಾಸಕರು ಮತ್ತು 257 ಶಿಕ್ಷಕರ ಹುದ್ದೆಗಳ ಭರ್ತಿಗೆ ಫೆಬ್ರುವರಿ 23ರಂದು ಒಪ್ಪಿಗೆ ನೀಡಿರುವ ಆರ್ಥಿಕ ಇಲಾಖೆ, 2021-22ನೇ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ನೇಮಕಾತಿ ಆದೇಶ ನೀಡುವಂತೆ ಷರತ್ತು ವಿಧಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top