ಬೆಂಗಳೂರು: ಈ ಬಾರಿಯ ಸಾಲಿನ ದ್ವಿತೀಯ ಪಿಯು ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ. 74.67 ಫಲಿತಾಂಶ ಬಂದಿದೆ.7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 524209 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಯಾದಗಿರಿ ಕೊನೆ ಸ್ಥಾನ ಪಡೆದಿದೆ. ದಾವಣಗೆರೆ 21 ನೇ ಸ್ಥಾನದಲ್ಲಿದೆ. ಬೆಬ್ ಸೈಟ್ : https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
- ಹೆಚ್ಚು ಅಂಕ ಗಳಿಸಿದ ವಿಭಾಗವಾರು ವಿವರ
- ವಿಜ್ಞಾನ ವಿಭಾಗ: ಕೌಶಿಕ್ ಎಸ್, ಜ್ಞಾನಗಂಗೊತ್ರಿ ಕಾಲೇಜು ಶ್ರೀನಿವಾಸಪುರ ಕೋಲಾರ ಅಂಕಗಳು– 596, ಸುರಭಿ ಎಸ್, ಆರ್ ವಿ ಪಿಯು ಕಾಲೇಜು ಬೆಂಗಳೂರು ಅಂಕಗಳು– 596
- ವಾಣಿಜ್ಯ ವಿಭಾಗ: ಅನನ್ಯ ಕೆ.ಎ, ಅಳ್ವಾಸ್ ಕಾಲೇಜು, ಮೂಡಬಿದರೆ 600 ಅಂಕಗಳು
- ಕಲಾವಿಭಾಗ; ತಬಸುಮ್ ಶೇಕ್, ಎನ್ಎಂಕೆಆರ್ ವಿ ಮಹಿಳಾ ಕಾಲೇಜು ಜಯನಗರ ಬೆಂಗಳೂರು– 593 ಅಂಕಗಳು



