Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಸತತ 15 ದಿನದಿಂದ ಭರ್ಜರಿ ಏರಿಕೆಯತ್ತ ಅಡಿಕೆ ದರ; ಕೇವಲ 15 ದಿನದಲ್ಲಿ 4 ಸಾವಿರ ಏರಿಕೆ..!

ದಾವಣಗೆರೆ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಸತತ 15 ದಿನದಿಂದ ಭರ್ಜರಿ ಏರಿಕೆಯತ್ತ ಅಡಿಕೆ ದರ; ಕೇವಲ 15 ದಿನದಲ್ಲಿ 4 ಸಾವಿರ ಏರಿಕೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಕಳೆದ 15 ದಿನದಿಂದ ಏರಿಕೆಯತ್ತ ಮುಖ ಮಾಡಿದೆ. ಬೆಲೆ ಏರಿಕೆ ಸಹಜವಾಗಿ ರೈತರಲ್ಲಿ ಸಂತಸ ಮೂಡಿಸಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಇದೀಗ ಭರ್ಜರಿ ಬೆಲೆ ಏರಿಕೆಯತ್ತ‌ ಮುಖ ಮಾಡಿದೆ. ಕಳೆದ 15 ದಿನದಲ್ಲಿ 4000 ರಷ್ಟು‌ ಏರಿಕೆ‌ ಕಂಡಿದೆ. ಇದೀಗ ಪ್ರತಿ ಕ್ವಿಂಟಾಲ್ ಬೆಲೆ 50 ಸಾವಿರ ಗಡಿ ಸಮೀಪ ಬಂದು ನಿಂತಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ವಹಿವಾಟಿನಲ್ಲಿ ಏ.21 ರಂದು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 49,699 ರೂ.ಗೆ ಮಾರಾಟವಾಗಿದೆ. ನಿನ್ನೆ 49,200 ರೂ.ಗೆ ಮಾರಾಟವಾಗಿತ್ತು. ಉತ್ತಮ ರಾಶಿಯ ಕನಿಷ್ಠ ಬೆಲೆ‌ 41,829 ಆಗಿದ್ದು, ಗರಿಷ್ಠ ಬೆಲೆ 49,699 ಹಾಗೂ ಸರಾಸರಿ ಬೆಲೆ 48,419ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 34,429 ರೂ. ಮಾರಾಟವಾಗಿದೆ. ಮುಂದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top