ಬೆಂಗಳೂರು: ರಾಜ್ಯದಾದ್ಯಂತ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಸರ್ವರ್ ಸಮಸ್ಯೆಯಿಂದ ಕೆಲಕಾಲ ತೊಂದರೆಯಾಗಿತ್ತು. ಈಗ ಸರ್ವರ್ ಸಮಸ್ಯೆ ಪರಿಹರಿಸಲಾಗಿದ್ದು, ಉಪನೋಂದಣಾಧಿಕಾರಿ ಕಚೇರಿಯಲ್ಲಿ (Sub-Registrar Office) ಆಸ್ತಿ ನೋಂದಣಿ (Property registration) ಮತ್ತೆ ಆರಂಭಗೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಾಳೆ ಅರ್ಧ ದಾವಣಗೆರೆಯಲ್ಲಿ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್ ..? ಇಲ್ಲಿದೆ ಮಾಹಿತಿ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಕೆಲಕಾಲ ಉಪನೋಂದಣಾಧಿಕಾರಿಗಳು ಸ್ಥಗಿತಗೊಳಿಸಿದ್ದ ಕಂಡುಬಂದಿತ್ತು. ಆದರೆ, ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರಯಲಿದೆ. ಯಾವುದೇ ಸಮಸ್ಯೆ ಇರುವುದಿಲ್ಲ. ಎಂದಿನಂತೆ ನೋಂದಣಿ ಮಾಡಿಸಬಹುದು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.



