ಬೆಂಗಳೂರು : ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದಕ್ಕೆ ಒಂದು ವಾರಗಳ ಕಾಲ ಅಮಾನತು ಮಾಡಿರುವ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭದ್ರಾವತಿ ಶಾಸಕ ಸಂಗಮೇಶ್ವರ್, ಸ್ಪೀಕರ್ ಬಿಜೆಪಿ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನ್ಯಾಯ ಕೇಳಲು ಹೋಗಿದ್ದ ನನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನನ್ನನ್ನು ಒಂದು ವಾರಗಳ ಕಾಲ ಸದನದಿಂದ ಅಮಾನತುಗೊಳಿಸಿದ್ದಾರೆ. ನಾನು ಮತ್ತೆ ಸದನದಲ್ಲಿ ಹೋಗುತ್ತೇನೆ. ಅಮಾನತುಗೊಳಿಸಿದ್ದನ್ನು ಕೇಳುತ್ತೇನೆ. ಬಿಜೆಪಿಯ ಏಜೆಂಟ್ ರಂತೆ ಸ್ಪೀಕರ್ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆಗಿದ್ದರು. ಅಲ್ಲದೇ ಸದನದಲ್ಲೇ ಶಾಸಕ ಸಂಗಮೇಶ್ ಅವರಿಗೆ ಎಚ್ಚರಿಕೆ ನೀಡಿದ್ದರು. ಈ ಬಳಿ ಆಡಳಿತ ಪಕ್ಷದೊಂದಿಗೆ ಚರ್ಚಿಸಿ, ಒಂದು ವಾರಗಳ ಕಾಲ ಸದನದಿಂದ ಶಾಸಕ ಬಿಕೆ ಸಂಗಮೇಶ್ ಅವರನ್ನು ಅಮಾನತುಗೊಳಿಸಿ ಆದೇಶಿದ್ದರು.
ಈ ಕುರಿತಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದಂತ ಶಾಸಕ ಬಿ ಕೆ ಸಂಗಮೇಶ್, ಸ್ಪೀಕರ್ ನಡೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ನಾನು ಮತ್ತೆ ಸದನದೊಳಗೆ ಹೋಗುತ್ತೇನೆ. ಸ್ಪೀಕರ್ ಏಕೆ ಅಮಾನತುಗೊಳಿಸಿದ್ದಾಗಿ ಪ್ರಶ್ನಿಸುತ್ತೇನೆ ಎಂದಿದ್ದಾರೆ.
ಸ್ಪೀಕರ್ ಬಿಜೆಪಿ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ನಾನು ಕೂಡ ಹಿಂದೂ. ನನ್ನ ಕ್ಷೇತ್ರದ ಜನರು ನನ್ನನ್ನು ಕೈಬಿಟ್ಟಿಲ್ಲ. ಭದ್ರಾವತಿ ಕ್ಷೇತ್ರದ ಜನರು ನನ್ನೊಂದಿಗೆ ಇರುವುದಾಗಿ ತಿಳಿಸಿದ್ದಾರೆ.



