Connect with us

Dvgsuddi Kannada | online news portal | Kannada news online

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದಾಗ ಕಣ್ಣೀರು ಹಾಕಿದೆ: ರೇಣುಕಾಚಾರ್ಯ

ಪ್ರಮುಖ ಸುದ್ದಿ

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದಾಗ ಕಣ್ಣೀರು ಹಾಕಿದೆ: ರೇಣುಕಾಚಾರ್ಯ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಾಗ ನಾನು ಮನೆಯಲ್ಲಿ ಕಣ್ಣೀರು ಹಾಕಿದ್ದೆ. ಈ ಪ್ರಕರಣ ನನಗೆ ನೋವು ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಬಹಳ ಒಳ್ಳೆಯ ಮನುಷ್ಯ, ಅವರ ಮನೆಯವರ ಪರಿಸ್ಥಿತಿ ನೆನಪಿಸಿಕೊಂಡ್ರೆ ನೋವಾಗುತ್ತೆ. ಆ ಹುಡುಗಿ ಬಂದು ದೂರು ಕೊಟ್ಟಿಲ್ಲ. ಇದರಿಂದ ರಮೇಶ್ ಜಾರಕಿಹೊಳಿ ಆರೋಪಿ ಅಂತಾನೂ ಹೇಳಲ್ಲ, ಅಪರಾಧಿ ಅಂತಾನೂ ಹೇಳಕ್ಕೆ ಆಗಲ್ಲ ಎಂದರು.

ಇನ್ನೆಷ್ಟು ಸಿಡಿಗಳಿವೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬ್ಯುಸಿ ಇದ್ದ ಕಾರಣ ಮೂರು ವಿಡಿಯೋಗಳನ್ನ ಸರಿಯಾಗಿ ನೋಡಿಲ್ಲ. ಆ ವಿಡಿಯೋಗಳು ನಕಲಿ ಅಂತಾ ರಮೇಶ್ ಜಾರಕಿಹೊಳಿಯವರೇ ಹೇಳಿದ್ದಾರೆ. ರಾಜಕಾರಣದಲ್ಲಿ ಈ ರೀತಿ ನಡೆಯಬಾರದು. ರಮೇಶ್ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಜೊತೆ ದೂರವಾಣಿ ಮೂಲಕ ಮಾತಾನಾಡಿರುವುದಾಗಿ ತಿಳಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top