ದಾವಣಗೆರೆ: ಮದ್ಯದಂಗಡಿ ಹರಾಜು ರಾಜ್ಯ ಸರ್ಕಾರದ ಹೊಸವರ್ಷದ ಕೊಡುಗೆ. ಮದ್ಯದಂಗಡಿ ಪರವಾನಗಿಗೆ ₹ 1.95 ಕೋಟಿ ದರ ನಿಗದಿಪಡಿಸಿದ ರಾಜ್ಯ ಸರ್ಕಾರ ಲೂಟಿಗೆ ಇಳಿದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ರಾಜ್ಯದ ಖಾಜಾನೆ ಕೊಳ್ಳೆ ಹೊಡೆಯಲು ಮುಂದಾಗಿದೆ. ಮದ್ಯದಂಗಡಿ ಹರಾಜು ರಾಜ್ಯ ಸರ್ಕಾರದ ಹೊಸವರ್ಷದ ಕೊಡುಗೆ.ಸರ್ಕಾರ ಪ್ರತಿ ಇಲಾಖೆಯನ್ನು ಲೂಟಿ ಮಾಡುತ್ತಿದೆ. ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಸೇರಿದಂತೆ ಎಲ್ಲವನ್ನು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಆಗಮನದ ಟೈಮ್ ಲೈನ್ ಇಲ್ಲಿದೆ…
ಹಲವು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇಂತಹ ಆರ್ಥಿಕ ತಜ್ಞರವನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ. ಸರ್ಕಾರದ ಖಜಾನೆಯಿಂದ ಸಾವಿರಾರು ಕೋಟಿ ಹಣ ಬಿಡುಗಡೆಯಾಗಿರುವುದು ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೊತ್ತಿಲ್ ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ಜನ ಅಧಿಕಾರ ನೀಡಿದ್ದಾರೆ. ಈ ಸರ್ಕಾರ ಬಂದ ದಿನದಿಂದ ಅಧಿಕಾರ ಹಂಚಿಕೆಯ ಕಿತ್ತಾಟ ನಡೆಯುತ್ತಿದೆ. ಇದು ಇನ್ನೂ ಎಷ್ಟು ದಿನ ಎಂದರು.



