Connect with us

Dvgsuddi Kannada | online news portal | Kannada news online

ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ

ಪ್ರಮುಖ ಸುದ್ದಿ

ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಇಂದು ಬೆಳಗ್ಗೆ  ಐಟಿ ದಾಳಿ ನಡೆದಿದ್ದು,  ಮಹತ್ವದ ದಾಖಲೆಗಾಹಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಬಿಎಸ್​ವೈ ಆಪ್ತ ಉಮೇಶ್ ವಾಸವಿದ್ದ ರಾಜಾಜಿನಗರ ಬಾಷ್ಯಂ ಸರ್ಕಲ್ ಬಳಿ ಮೂರಂತಸ್ತಿನ ಮನೆ ಸೇರಿ ಅವರಿಗೆ ಸಂಬಂಧಿಸಿದ 4 ಕಡೆ ಏಕಕಾಲಕ್ಕೆ ಐಟಿ ದಾಳಿಯಾಗಿದೆ. ಬಿಎಸ್​ವೈ ಸಿಎಂ ಆಗಿದ್ದಾಗ ಪಿಎ ಆಗಿದ್ದ ಉಮೇಶ್​, ಬಿಎಂಟಿಸಿ ಬಸ್​ ಕಂಡಕ್ಟರ್​ ಕಂ ಡ್ರೈವರ್​​​ ಆಗಿದ್ದರು.ಡೆಫ್ಯುಟೇಷನ್​ ಮೇಲೆ ಬಿಎಸ್​ವೈ ಆಪ್ತನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಬಾಷ್ಯಂ ಸರ್ಕಲ್​ ಬಳಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರುಇಂದು  ಬೆಳಗ್ಗೆ 5 ಗಂಟೆ ಸುಮಾರಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಉಮೇಶ್​ 2008ರಿಂದಲೂ ಯಡಿಯೂರಪ್ಪ ಜತೆ ಆಪ್ತ ಒಡನಾಡಿಯಾಗಿದ್ದರು.  ಕಡತ ವಿಲೇವಾರಿ, ವರ್ಗಾವಣೆ ಕೆಲಸಗಳ ಜತೆಗೆ ನೀರಾವರಿ ಇಲಾಖೆಯ ವ್ಯವಹಾರವನ್ನು ಉಮೇಶ್​ ಮಾಡುತ್ತಿದ್ದರು ಎಂಬ  ಆರೋಪ ಕೇಳಿ ಬಂದಿದೆ. ಯಡಿಯೂರಪ್ಪ ಮಾತ್ರವಲ್ಲ, ಸಂಸದ ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರಿಗೂ ಪಿಎ ​ ಕೆಲಸ ಮಾಡುತ್ತಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top