Connect with us

Dvgsuddi Kannada | online news portal | Kannada news online

ಪ್ರಧಾನಿ ಗಡ್ಡ ಬಿಟ್ಟುಕೊಂಡ್ರೆ ಠಾಗೂರ್ ಆಗಲ್ಲ ಎಂಬ  ಖರ್ಗೆ ಹೇಳಿಕೆ ಬಿಜೆಪಿ ತಿರುಗೇಟು; ಗಾಂಧಿ ಹೆಸರು ಇಟ್ಟುಕೊಂಡ ಎಲ್ಲರೂ ಮಹಾತ್ಮರಾಗಲ್ಲ..!

ರಾಜಕೀಯ

ಪ್ರಧಾನಿ ಗಡ್ಡ ಬಿಟ್ಟುಕೊಂಡ್ರೆ ಠಾಗೂರ್ ಆಗಲ್ಲ ಎಂಬ  ಖರ್ಗೆ ಹೇಳಿಕೆ ಬಿಜೆಪಿ ತಿರುಗೇಟು; ಗಾಂಧಿ ಹೆಸರು ಇಟ್ಟುಕೊಂಡ ಎಲ್ಲರೂ ಮಹಾತ್ಮರಾಗಲ್ಲ..!

ಬೆಂಗಳೂರು: ಪ್ರಧಾನಿ  ನರೇಂದ್ರ ಮೋದಿ ಗಡ್ಡ ಬಿಟ್ಟುಕೊಂಡ ಮಾತ್ರಕ್ಕೆ ರವೀಂದ್ರನಾಥ್ ಠಾಗೂರ್ ಆಗುವುದಿಲ್ಲ ಎಂಬ  ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ  ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಕಲ್ಯಾಣ ಕರ್ನಾಟಕ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರೇ ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಮಹಾತ್ಮ ಆಗಲಾರರು. ಈ ನಿಯಮ ನಕಲಿ ಗಾಂಧಿ ಕುಟುಂಬಕ್ಕೆ ಅನ್ವಯ ಆಗುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಗಾಂಧಿ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಎಲ್ಲರು ಮಹಾತ್ಮರಾಗುವುದಿಲ್ಲ ಎಂದು ಟಾಂಗ್ ನೀಡಿದೆ.’ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಠಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ ಎಂದು   ಮಲ್ಲಿಕಾರ್ಜುನ ‌ಖರ್ಗೆ ಮಸ್ಕಿ ಉಪ ಚುನಾವಣೆ ಪ್ರಚಾರದಲ್ಲಿ  ಹೇಳಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top