ದಾವಣಗೆರೆ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆ ದಾವಣಗೆರೆ, ಹರಿಹರ ನಗರಗಳ ಒಟ್ಟು 17 ಕೇಂದ್ರಗಳಲ್ಲಿ ನಡೆದಿದೆ. ಪರೀಕ್ಷೆ ತೆಗೆದುಕೊಂಡಿದ್ದ 7999 ವಿದ್ಯಾರ್ಥಿಗಳಲ್ಲಿ 7787 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 212 ಅಭ್ಯರ್ಥಿಗಳು ಗೈರಾಗಿದ್ದಾರೆ.
ನೀಟ್ ಪರೀಕ್ಷೆಗೆ ಫೋಟೋ ಹಾಜರುಪಡಿಸುವುದು ಕಡ್ಡಾಯವಾಗಿತ್ತು. ಕೆಲವರು ಫೋಟೋ ಇಲ್ಲದೇ, ಪರದಾಡಿದರು. ಫೋಟೋ ಬಿಟ್ಟು ಬಂದವರು ಸಮೀಪದ ಫೋಟೋ ಸ್ಟುಡಿಯೋ ತೆರಳಿ, ಫೋಟೋ ತೆಗೆಸಿಕೊಂಡು ಬಂದು ಪರೀಕ್ಷೆ ಬರೆದರು.
ಪ್ರವೇಶ ಪತ್ರ, ಆಧಾರ್ ಕಾರ್ಡ್, ಇತರೆ ಗುರುತಿನ ಚೀಟಿ ಪರಿಶೀಲನೆ ನಡೆಸಲಾಯಿತು.ಸಾಕಷ್ಟು ತಪಾಸಣೆ ನಡೆಸಿದ ನಂತರವೇ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಯಿತು.
ಬ್ಯಾಗ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ವಸ್ತುಗಳು, ಇತರೆ ಯಾವುದೇ ವಿದ್ಯುನ್ಮಾನ ಉಪಕರಣಗಳಿಗೆ ಪರೀಕ್ಷಾ ಕೇಂದ್ರದೊಳಗೆ ರೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ಹೈಹೀಲ್ಡ್ ಚಪ್ಪಲಿ, ಶೂಗಳನ್ನು ಕೇಂದ್ರದ ಹೊರ ಭಾಗದಲ್ಲೇ ಬಿಟ್ಟು ಪರೀಕ್ಷೆ ಬರೆದರು.



