ದಾವಣಗೆರೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ ಪ್ರವರ್ಗ-3ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್)ವರೆಗೆ ಬರುವ ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ,ಕ್ಷತ್ರಿಯ ಮರಾಠ, ಕುಳವಾಡಿ ಜನರ ಆರ್ಥಿಕ ಅಭಿವೃಧ್ಧಿಗಾಗಿ ಸಾಲ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು 50 ಸಾವಿರ ರೂ.ಗಳ ವರೆಗೆ ಆರ್ಥಿಕ ನೆರವು. ಶೇ.20ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಅರ್ಜಿದಾರರ ವಯಸ್ಸು ಕನಿಷ್ಠ 18 ರಿಂದ 25 ವರ್ಷದೊಳಗಿನ ಆಸಕ್ತರು ಸುವಿಧಾ https://suvidha.karnataka.gov.in ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಮರಾಠ ಯುವಜನತೆಯನ್ನು ಉದ್ಯೋಗ ಮುಖಿಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐ.ಟಿ.ಐ.ಎಸ್, ಜಿ.ಟಿ.ಟಿ.ಸಿ ಮತ್ತು ಕೆ.ಜಿ.ಟಿ.ಟಿ.ಐ ಅಲ್ಪಾವಧಿ ಕೋರ್ಸುಗಳಿಗೆ ಆನ್‍ಲೈನ್ ಮೂಲಕ ಕೌಶಲ್ಯ ಕರ್ನಾಟಕ ಪೋರ್ಟಲ್ https://www.kaushalkar.com ನಲ್ಲಿ ಅಗಸ್ಟ್ 19 ರೊಳಗಾಗಿ ಅರ್ಜಿ ಸಲ್ಲಿಸಬಹುದು.



