Connect with us

Dvgsuddi Kannada | online news portal | Kannada news online

ಕರ್ನಾಟಕ ಲೋಕಸೇವಾ ಆಯೋಗವು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯಲ್ಲಿ ಖಾಲಿ ಇರುವ 410 ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ

ಕರ್ನಾಟಕ ಲೋಕಸೇವಾ ಆಯೋಗವು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯಲ್ಲಿ ಖಾಲಿ ಇರುವ 410 ಗ್ರೂಪ್ ಸಿ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ) ಪೌರಾಡಳಿತ ಇಲಾಖೆಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯಲ್ಲಿ ಖಾಲಿ ಇರುವ ಗ್ರೂಪ್‌  ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಕಿರಿಯ ಎಂಜಿನಿಯರ್‌(ಸಿವಿಲ್), ಕಿರಿಯ ಆರೋಗ್ಯ ನಿರೀಕ್ಷಕರು, ಎಲೆಕ್ಟ್ರೀಷಿಯನ್ ಗ್ರೇಡ್‌-1 ಮತ್ತು ಗ್ರೇಡ್‌ 2, ನೀರು ಸರಬರಾಜು ಆಫರೇಟರ್‌, ಸಹಾಯಕ ನೀರು ಸರಬರಾಜು ಆಪರೇಟರ್‌ ಸೇರಿ ಒಟ್ಟು 410 ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ವಿದ್ಯಾರ್ಹತೆ

  •  ಕಿರಿಯ ಎಂಜಿನಿಯರ್ –  ಮೂರು ವರ್ಷಗಳ ಅವಧಿಯ ಸಿವಿಲ್‌ ಎಂಜಿನಿಯರಿಂಗ್-ಡಿಪ್ಲೊಮಾ
  • ಎಲೆಕ್ಟ್ರಿಲ್ ಎಂಜಿನಿಯರ್‌-  ಎರಡು ವರ್ಷಗಳ ಅವಧಿಯ ಎಲೆಕ್ಟ್ರಿಕಲ್‌ ಅಥವಾ ಫಿಟರ್‌ನಲ್ಲಿ ಟಿಐ ಜೊತೆಗೆ, ಒಂದು ವರ್ಷ ಅಪ್ರೆಂಟಿಷಿಪ್‌ ಟ್ರೈನಿಂಗ್‌
  •  ಕಿರಿಯ ಆರೋಗ್ಯ ನಿರೀಕ್ಷಕ- ಎರಡು ವರ್ಷಗಳ ಅವಧಿಯ ಹೆಲ್ತ್‌ ಇನ್‌ಸ್ಪೆಕ್ಟರ್‌ ಡಿಪ್ಲೊಮಾ ಪೂರ್ಣಗೊಳಿಸಿರಬೇಕು

ವಯೋಮಿತಿ

  • ಎಲ್ಲ ಹುದ್ದೆಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿ
  •  ಎಸ್‌.ಸಿ, ಎಸ್‌.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಅಂಗವಿಕಲರಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಸಲ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇಂದಿನಿಂದ(ಮಾ. 31) ಅರ್ಜಿ ಸಲ್ಲಿಕೆ ಆರಂಭ. ಏ. 29 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಧಿಸೂಚನೆ ಮಾಹಿತಿಗಾಗಿ https://kpsc.kar.nic.in/Notification ಭೇಟಿ ನೀಡಿ .

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top