ಬೆಂಗಳೂರು: ಕೆಎಂಎಫ್ ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಿವಿಧ ಒಟ್ಟು 179 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಸಿಸ್ಟೆಂಟ್ ಮ್ಯಾನೇಜರ್- 27, ಟೆಕ್ನಿಕಲ್ ಆಫೀಸರ್ -15, ಮಾರ್ಕೆಟಿಂಗ್ ಆಫೀಸರ್- 2, ಸಿಸ್ಟಮ್ ಆಫೀಸರ್-1, ಟೆಕ್ನಿಕಲ್ ಆಫೀಸ್-1, ಅಗ್ರಿಕಲ್ಚರ್ ಆಫೀಸರ್-3, ಅಡ್ಮಿನಿಸ್ಟ್ರೇಟೀವ್ ಆಫೀಸರ್-1, ಟೆಕ್ನಿಕಲ್ ಆಫೀಸರ್-3, ಅಕೌಂಟ್-1, ಎಕ್ಸ್‌ಟೆನ್ಶನ್ ಆಫೀಸರ್(ಗ್ರೇಡ್ -3)- 16, ಡೇರಿ ಸೂಪ್ರವೈಸರ್(ಗ್ರೇಡ್-2)-12, ಅಡ್ಮಿನಿಸ್ಟ್ರೇಟೀವ್ ಅಸಿಸ್ಟೆಂಟ್(ಗ್ರೇಡ್-2)-24 ಸೇರಿದಂತೆ ಒಟ್ಟು 179 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ – ಇಲಾಖೆ: ಕರ್ನಾಟಕ ಮಿಲ್ಕ್ ಫೆಡರೇಶನ್, ಕೋಲಾರ- ಚಿಕ್ಕಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರಬೇಕು.ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ( ಪರಿಶಿಷ್ಟರಿಗೆ, ಹಿಂದುಳಿದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ).
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿವಿಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಅರ್ಜಿ ಅಲ್ಲಿಸಲು ದಿನಾಂಕ: 04.10.2023 ಕೊನೆಯ ದಿನವಾಗಿದೆ. ಸಾಮಾನ್ಯ ಅಭ್ಯರ್ಥಿಗೆ 1000 ರೂ. ಎಸ್ಸಿ-ಎಸ್ಟಿ ಅಭ್ಯರ್ಥಿಗೆ 500 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬ್‌ಸೈಟ್: http://www.komul.coop/ ಭೇಟಿ ನೀಡಿ.



