Connect with us

Dvgsuddi Kannada | online news portal | Kannada news online

ರಾಜ್ಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 320 ಹುದ್ದೆ ಭರ್ತಿಗೆ ಅಧಿಸೂಚನೆ

ಪ್ರಮುಖ ಸುದ್ದಿ

ರಾಜ್ಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 320 ಹುದ್ದೆ ಭರ್ತಿಗೆ ಅಧಿಸೂಚನೆ

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವಿವಿಧ 320 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಇಲಾಖೆಯ ಕಲ್ಯಾಣ-ಕರ್ನಾಟಕ ಜಿಲ್ಲೆಗಳಾದ ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಅರೆ-ವೈದ್ಯಕೀಯ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ನಡೆಯಲಿದೆ.

ಹುದ್ದೆಗಳ ವಿವರ:ಸೈಕಾಲಜಿಸ್ಟ್ -03,ಸೈಕ್ಯಾಟ್ರಿಸ್ಟ್ ಸೋಷಿಯಲ್ ವರ್ಕರ್ – 01, ಮೈಕ್ರೋಬಯೋಲಜಿಸ್ಟ್ -06, ಅಸಿಸ್ಟೆಂಟ್ ಎಕೋಲಜಿಸ್ಟ್ -01, ಫಿಸಿಯೋಥೆರಪಿಸ್ಟ್ – 05, ಡೆಂಟಲ್ ಮೆಕ್ಯಾನಿಕ್ -03, ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ – 54, ಅಪ್ತಲ್ಮಿಕ್ ಆಫೀಸರ್ – 15, ಫಾರ್ಮಸಿಸ್ಟ್ – 98, ಇಸಿಡಿ ಟೆಕ್ನೀಷಿಯನ್ – 05, ಡಯಾಲಿಸಿಸ್ ಟೆಕ್ನೀಷಿಯನ್ -02, ಜೂನಿಯರ್ ಹೆಲ್ತ್ ಅಸಿಸ್ಟೆನ್ಸ್ – 126, ಎಲೆಕ್ಟ್ರೀಷಿಯನ್ -01.

ಪ್ರಮುಖ ದಿನಾಂಕಗಳು: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 29-08-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28-09-2022 ಆಗಿದೆ. ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 29-09-2022 .

ಅರ್ಜಿ ಶುಲ್ಕ:ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.700, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.400, ಮಾಜಿ ಸೈನಿಕರಿಗೆ ರೂ.200, ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ವಿಕಲಚೇತನರಿಗೆ ರೂ.100.

ವಯೋಮಿತಿ: ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷಗಳು. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು.

ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು http://karunadu.karnataka.gov.in/hfw/pages/hfws_sections_drc.aspx ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top