Connect with us

Dvgsuddi Kannada | online news portal | Kannada news online

200 ಯೂನಿಟ್ ಫ್ರೀ ವಿದ್ಯುತ್ ಪಡೆಯಲು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭ; ಆಧಾರ್ ಕಾರ್ಡ್, ಬಿಲ್ ನ ಆರ್ ಆರ್ ನಂಬರ್, ಫೋನ್ ನಂಬರ್ ಇದ್ರೆ ಸಾಕು..!

ಪ್ರಮುಖ ಸುದ್ದಿ

200 ಯೂನಿಟ್ ಫ್ರೀ ವಿದ್ಯುತ್ ಪಡೆಯಲು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭ; ಆಧಾರ್ ಕಾರ್ಡ್, ಬಿಲ್ ನ ಆರ್ ಆರ್ ನಂಬರ್, ಫೋನ್ ನಂಬರ್ ಇದ್ರೆ ಸಾಕು..!

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯ ಪ್ರತಿ ಗೃಹ ಬಳಕೆಯ ಮಾಸಿಕ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್‌ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭ ಆರಂಭವಾಗಲಿದೆ.

ಈ ಯೋಜನೆ ಪಡೆಯಲು ಗ್ರಾಹಕರು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ವಿವರ ಇಲ್ಲಿದೆ. ಉಚಿತ 200 ಯೂನಿಟ್​ ವಿದ್ಯುತ್​ ಪಡೆಯಲು https://sevasindhugs.karnataka.gov.in ನೋಂದಾಯಿಸಿಕೊಳ್ಳಬೇಕಿದೆ. ಖುದ್ದು ನೀವೆ ಮೊಬೈಲ್/ಕಂಪ್ಯೂಟರ್/ಲ್ಯಾಪ್‌ಟಾಪ್ ಗಳಲ್ಲಿ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ನಾಡಕಛೇರಿ ಅಥವಾ ಎಲ್ಲಾ
ವಿದ್ಯುತ್ ಕಛೇರಿಗಳಲ್ಲಿ ನೋಂದಾಯಿಸಬಹುದಾಗಿದೆ. ನೋಂದಣಿ ಮಾಡುವಾಗ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್ ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಛೇರಿಯನ್ನು ಸಂಪರ್ಕಿಸಿ ಅಥವಾ 24X7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ ಅಥವಾ ಇಂಧನ ಇಲಾಖೆಯ
ಅಧಿಕೃತ ವೆಬ್ ಸೈಟ್ https://energy.karnataka.gov.in ಗೆ ಭೇಟಿ ನೀಡಿ. ನೋಂದಣಿ ಜೂನ್ 18, 2023 ರಿಂದ ಆರಂಭವಾಗಲಿದೆ.ಗೃಹ ಜ್ಯೋತಿ ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ಜುಲೈ 1ರಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top