Connect with us

Dvgsuddi Kannada | online news portal | Kannada news online

ರೈತ ಮಕ್ಕಳಿಗೆ ಸರ್ಕಾರದ ಭರ್ಜರಿ ಗಿಫ್ಟ್: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಶಿಷ್ಯ ವೇತನ ನೋಂದಣಿ ಆರಂಭ

ಪ್ರಮುಖ ಸುದ್ದಿ

ರೈತ ಮಕ್ಕಳಿಗೆ ಸರ್ಕಾರದ ಭರ್ಜರಿ ಗಿಫ್ಟ್: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಶಿಷ್ಯ ವೇತನ ನೋಂದಣಿ ಆರಂಭ

ಬೆಂಗಳೂರು : ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟ ಮೊದಲು ಘೋಷಿಸಿದ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣ ಪಡರಯುತ್ತಿರುವ ರೈತ ಮಕ್ಕಳ ಶಿಷ್ಯವೇತನ ನೋಂದಣಿಗಾಗಿ ಅರ್ಜಿ ಆಹ್ವಾನಿಸಿದೆ.

  • ಶಿಷ್ಯ ವೇತನ ವಿವರ
  • ಪಿಯುಸಿ,ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗೆ 2,500, ವಿದ್ಯಾರ್ಥಿನಿಯರಿಗೆ 3000
  • ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗೆ 5000, ವಿದ್ಯಾರ್ಥಿನಿಯರಿಗೆ 5,500
  • ಸ್ನಾತಕೋತ್ತರ ವಿದ್ಯಾರ್ಥಿಗೆ 10,000, ವಿದ್ಯಾರ್ಥಿನಿಯರಿಗೆ 11,000

ಅರ್ಹತೆ

  • 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಹೊಂದಿರಬೇಕು.
  • 2021-22 ನೇ ಶೈಕ್ಷಣಿಕ ವರ್ಷದ ದಾಖಲಾತಿ ಪೂರ್ಣಗೊಂಡ ನಂತರ ಎರಡನೇ ಹಂತದಲ್ಲಿ ಮಾಹಿತಿ ಪ್ರಕ್ರಿಯೆ ಪೂರ್ಣಗೊಳಿಸುವುದು.

ಅರ್ಜಿಸಲ್ಲಿಸುವ ಅರ್ಹ ರೈತ ಮಕ್ಕಳು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ https://ssp.postmatric,karnataka.gov.in/ ಗೆ ಭೇಟಿ ನೀಡಬಹುದು. ವಿದ್ಯಾರ್ಥಿಯು ರೈತರ ಮಕ್ಕಳಾಗಿರಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ರೈತರ ಗುರುತಿನ ಸಂಖ್ಯೆ ಹೊಂದಿರಬೇಕು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top