ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕು ರೈತ ಸಂಪರ್ಕ ಕೇಂದ್ರದಿಂದ 2025-26ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆ ಅಡಿ ತುಂತುರು ನೀರಾವರಿ (Sprinkler irrigation) ಘಟಕಗಳಿಗೆ ಶೇ 90ರ ಸಹಾಯಧನದಲ್ಲಿ (subsidy) ಶೇ ಸಲಕರಣೆಗಳನ್ನು ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ; ಕೆಲವೆಡೆ ಮೋಡ ಕವಿದ ವಾತಾವರಣ
ಯಾವ ದಾಖಲೆ ಅಗತ್ಯ
ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 30 ಪೈಪ್ ಮತ್ತು 5 ಜೆಟ್ ನೀಡಲಾಗುವುದು. 63 ಎಂಎಂ ಸೆಟ್ ಗೆ ರೈ ರೈತರ ವಂತಿಕೆ 2,666 ಹಾಗೂ 75 ಎಂಎಂ ಸೆಟ್ ಗೆ ರೈತರ ವಂತಿಕೆ 3,018 ರೂ.ಗಳನ್ನು ಕೃಷಿ ಇಲಾಖೆಗೆ ಸಂದಾಯ ಮಾಡಿ ಸಹಾಯಧನ ಅಡಿ ಪೈಪ್ ಪಡೆಯಬಹುದು. ಅರ್ಹ ರೈತರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಸಬಾ ಹೋಬಳಿ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮೆಹತಾಬ್ ಅಲಿ ಪ್ರಕಟಣೆಯಲ್ಲ ತಿಳಿಸಿದ್ದಾರೆ.
ದಾವಣಗೆರೆ: ಜಿಲ್ಲೆಯಲ್ಲಿ ಬಿಎಸ್ ಎನ್ ಎಲ್ ಟವರ್ ಸ್ಥಾಪಿಸಲು ಸಂಸದೆ ಒತ್ತಾಯ



