Connect with us

Dvgsuddi Kannada | online news portal | Kannada news online

ಲೋಕಸಭಾ ಚುನಾವಣೆ: ಪ್ರಧಾನಿ, ಆರ್ ಎಸ್ ಎಸ್ ನನ್ನನ್ನು ಸೋಲಿಸಲು ಟಾರ್ಗೆಟ್ ಮಾಡಿದ್ರು: ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ರಾಜಕೀಯ

ಲೋಕಸಭಾ ಚುನಾವಣೆ: ಪ್ರಧಾನಿ, ಆರ್ ಎಸ್ ಎಸ್ ನನ್ನನ್ನು ಸೋಲಿಸಲು ಟಾರ್ಗೆಟ್ ಮಾಡಿದ್ರು: ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ದಾವಣಗೆರೆ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್, ಹಿಂದೂ ಸಂಘಟನೆಗಳು ಹಾಗೂ  ದೇಶದ ಪ್ರಧಾನಿ ನನ್ನನ್ನು ಸೋಲಿಸಬೇಕೆಂದು ಟಾರ್ಗೆಟ್ ಮಾಡಿದ್ದರು ಎಂದು ರಾಜಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ  ಶಾಮನೂರು ಶಿವಶಂಕರಪ್ಪ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ನನ್ನ ಚುನಾವಣೆ ಕಡೇ ಚುನಾವಣೆಯಾಗಿತ್ತು. 12 ಚುನಾವಣೆಯಲ್ಲಿ ‌ನಾನು ಗೆದ್ದಿದೆ. ಆದ್ರೆ ನನ್ನನ್ನು ಸೋಲಿಸಿದ್ರು. ಅದಕ್ಕೆ ಕ್ಷೇತ್ರದ ಜನಾನು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

ರಾಜ್ಯ ಸಭಾ ವಿರೋಧ ಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ  ಸೋನಿಯಾ ಹಾಗು ರಾಹುಲ್ ಗಾಂಧಿಗೆ ಧನ್ಯವಾದಗಳು.  ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ.ರಾಹುಲ್ ಉತ್ತರ ಭಾರತ ದಕ್ಷಿಣ ಭಾರತದವರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರ ಯಾವ ಕಾಂಟೆಕ್ಟ್ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರನ್ನು ಭೇಟಿಯಾದ ನಂತರ ಆ ಬಗ್ಗೆ ಮಾತನಾಡುತ್ತೇನೆ.

ಡೆಲ್ಲಿ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮೂರು ಕಾನೂನು ಗಳು ರೈತರ ವಿರೋಧಿ ಹಾಗು ಜನವಿರೋಧಿ ಇದೆ.ಎರಡುವರೆ ಹೆಕ್ಟೇರ್ ಗಿಂತ ಕಡಿಮೆ ಇರುವ ರೈತರ ಸಂಖ್ಯೆ ಶೇ 86 ರಷ್ಟಿದೆ  ಎಂದರು.

ಮೋದಿ ಪೆಟ್ರೋಲ್ ಬೆಲೆ‌ ಏರಿಗೆ ಮಾಡಿ, ಕಾಂಗ್ರೆಸ್ ನವರಿಗೆ ಬೈಯುತ್ತಿದ್ದಾರೆ. ನಮ್ಮ ಸರ್ಕಾರದ ಇದ್ದಾಗ ಪೆಟ್ರೋಲ್ ಬೆಲೆ 75 , ಡೀಸೆಲ್‌ನ ಬೆಲೆ 65 ರ ಮೇಲೆ ಹೋಗಿರಲಿಲ್ಲ.. ಡಿಸೇಲ್ ಬಹಳಷ್ಟು ಬಳಕೆ ಮಾಡೋದೇ ರೈತರಿಗೆ. ರೈತರ ಪರವಾಗಿದ್ದೇವೆ ಎಂದು ಹೇಳಿ ಬೆಲೆ ಏರಿಕೆ ಮಾಡ್ತಾರೆ. 70 ವರ್ಷ ಕೇವಲ ಕಾಂಗ್ರೆಸ್ ಅಡಳಿತ ಮಾಡಿಲ್ಲ. ವಾಜಪೇಯಿ ಯವರು ಅಡಳಿತ ಮಾಡಿದ್ರು, ದೇವೇಗೌಡ ಅಡಳಿತ ಮಾಡಿದ್ರು. ವಾಜಪೇಯಿ ಯನ್ನು ಸೇರಿಸಿಕೊಂಡು ಮೋದಿ ಬೈತಾ ಇದ್ದಾರೆ.

ದಿನೇ ದಿನೇ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಲಾಕ್ ಡೌನ್ ನಿಂದ ಸಾಕಷ್ಟು ಜನರು ನೋವು ಅನುಭವಿಸಿದ್ದಾರೆ. ಐಟಿ, ಇಡಿ ಹೆದರಿಕೆ ತೋರಿಸಿ ರಾಜ್ಯಗಳನ್ನು ಗೆಲ್ಲುತ್ತಿದ್ದಾರೆ. ಪಾಂಡಿಚೇರಿ ಯಲ್ಲಿ ನಾಲ್ಕು ಜನರನ್ನು ಖರೀದಿ ಮಾಡಿ ಹೆದರಿಸಿ ಅಧಿಕಾರ ಹಿಡಿದರು. ಗೋವಾ, ಮಣಿಪುರ್, ಕರ್ನಾಟಕ ಸೇರಿದಂತೆ ಹಲವು ಕಡೆ ಸರ್ಕಾರ ಕೆಡೆವಿ ಅಧಿಕಾರಕ್ಕೆ ಬಂದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top
(adsbygoogle = window.adsbygoogle || []).push({});