Connect with us

Dvgsuddi Kannada | online news portal | Kannada news online

ಇಂದು ರಾತ್ರಿ 10:30 ಕ್ಕೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು; ಸಾವರ್ಜನಿಕರಿಗೆ ಎಚ್ಚರಿಕೆ

ದಾವಣಗೆರೆ

ಇಂದು ರಾತ್ರಿ 10:30 ಕ್ಕೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು; ಸಾವರ್ಜನಿಕರಿಗೆ ಎಚ್ಚರಿಕೆ

ದಾವಣಗೆರೆ:  ವಿಜಯನಗರ ಜಿಲ್ಲೆಯ  ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ  ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವಾರ್ಷಿಕ ಕಾರ್ಣಿಕೋತ್ಸವ ಜರುಗುವ ಪ್ರಯುಕ್ತ ಭದ್ರಾ ಜಲಾಶಯದಿಂದ ಫೆ.25 ರಂದು ರಾತ್ರಿ 10:30 ಕ್ಕೆ ತುಂಗಾಭದ್ರಾ ನದಿಗೆ ನೀರು ಹರಿಸಲಾಗುವುದು.

ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿ ಪಾತ್ರದಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ ಸೆಟ್‍ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top