Connect with us

Dvgsuddi Kannada | online news portal | Kannada news online

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರನ್ನೂ ಬಿಡದ ಸೈಬರ್ ಕಳ್ಳರು..!; ಒಟಿಪಿ ಪಡೆದು 89 ಸಾವಿರ ವಂಚನೆ

ಕ್ರೈಂ ಸುದ್ದಿ

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರನ್ನೂ ಬಿಡದ ಸೈಬರ್ ಕಳ್ಳರು..!; ಒಟಿಪಿ ಪಡೆದು 89 ಸಾವಿರ ವಂಚನೆ

ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಅವರನ್ನೂ ಬಿಡದ ಸೈಬರ್ ಕಳ್ಳರು, ಅಚರ ಬ್ಯಾಂಕ್​​ ಖಾತೆಯಿಂದ 89 ಸಾವಿರ ಕನ್ನ ಹಾಕಿರುವ ಘಟನೆ ನಡೆದಿದೆ.

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆಮಾಡಿದ ವಂಚಕರು. ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿಗೆ ಕಳ್ಳರು ವಂಚಿಸಿದ್ದಾರೆ. ನಿಮ್ಮ ಅಕೌಂಟ್​​ಗೆ ಪಾನ್​ ಕಾರ್ಡ್​ ಲಿಂಕ್​ ಮಾಡಬೇಕು. ಲಿಂಕ್ ಮಾಡದಿದ್ದರೆ ಖಾತೆ ಬಂದಾಗುತ್ತದೆ ಎಂದು ಹೇಳಿ ಒಟಿಪಿ ಪಡೆದು ಅಕೌಂಟ್​​ನಲ್ಲಿದ್ದ 89 ಸಾವಿರ ರೂಪಾಯಿ ವಂಚನೆ ಮಾಡಿದ್ದಾರೆ. ಆಗ್ನೇಯ ವಿಭಾಗದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಶಂಕರ್ ಬಿದರಿ ದೂರು‌ ನೀಡಿದ್ದಾರೆ. ಬಿದರಿ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಸೈಬರ್ ಕಳ್ಳರು ಮೊಬೈಲ್ ಫೋನ್, ಇಂಟರ್​ನೆಟ್​ ಸೇರಿ ಹಲವು ರೀತಿಯಿಂದ ಜನರನ್ನು ವಂಚನೆ ಮಾಡಲಾಗುತ್ತಿದೆ. ನಕಲಿ ಫೇಸ್​ಬುಕ್ ಖಾತೆಯಲ್ಲಿ ಹಣ ಕೇಳುವುದು, ಮೆಸೇಜ್ ಮೂಲಕ, ನಿಮಗೆ ಲಾಟರಿ ಬಂದಿದೆ, ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ ಆಗಿದೆ, ನಾವು ಇಂತಹ ಕಚೇರಿ ಸಿಬ್ಬಂದಿ ಅಂತಾ ಹೇಳಿ ವಂಚನೆ ನಡೆಸುತ್ತಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top