ಬೆಂಗಳೂರು: ಬೆಂಗಳೂರು ಕೊರೊನಾ ಸೋಂಕಿತರ ಮೂಲ ಸ್ಥಳವಾಗಿದ್ದು, ಇಲ್ಲಿ ಮೊದಲು ಕಡಿವಾಣ ಹಾಕಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ಧಾರೆ
ಕೊರೊನಾ ಕರ್ಫ್ಯೂ ಮುಂದುವರಿಸಬೇಕಾ ..? ಬೇಡವಾ ..? ಎನ್ನುವ ಬಗ್ಗೆ ಚರ್ಚಿಸಲು ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯತ್ತಿದೆ. ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಬೆಂಗಳೂರಲ್ಲಿ ರಾಜ್ಯದ ಶೇ 72ರಿಂದ 80 ರಷ್ಟು ಸೋಂಕಿತರಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಈ ವಾರ ಪೂರ್ತಿ ಕರ್ಫ್ಯೂ ಮುಂದುವರಿಸಬೇಕು ಎಂದಿದ್ದಾರೆ.
ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಪ್ರತಿ ದಿನದ 50 ಸಾವಿರಕ್ಕೂ ಹೆಚ್ಚಿ ಸೋಂಕಿತರರು ಪತ್ತೆಯಾದರೂ ಅಚ್ಚರಿ ಇಲ್ಲ. ಹೀಗಾಗಿ ಕರ್ಫ್ಯೂ ಮುಂದುವರಿಸಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಬೆಂಗಳೂರು ಸ್ಥಿತಿಗತಿ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಿದ್ದಾರೆ. ಈ ಸಭೆಯಲ್ಲಿ ವ್ಯಕ್ತವಾಗುವ ಮಾಹಿತಿ ಮತ್ತು ತಜ್ಞರ ಸಲಹೆ ಮೇರೆಗೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಮತ್ತೊಂದೆಡೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್‌ಗಳ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮತ್ತೆ ಬೆಂಗಳೂರಲ್ಲಿ ಲಾಕ್ ಡೌನ್ ಹೇರುವ ಭಯದಿಂದ ಬೆಂಗಳೂರಿನಲ್ಲಿ ಸಾವಿರಾರು ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.