ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ (College education) ಪ್ರಾದೇಶಿಕ ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ 700 ಸಹಾಯಕರು ಮತ್ತು 300 ಪ್ರಯೋಗಾಲಯ ಸಹಾಯಕ ಸಿಬ್ಬಂದಿ (ಗ್ರೂಪ್-ಡಿ) ಸೇವೆಯನ್ನು ಹೊರಗುತ್ತಿಗೆ (Outsourcing) ಆಧಾರದ ಮೇಲೆ ಒದಗಿಸಲು ದಾವಣಗೆರೆಯ ಜೆಮಿನಿ ಸೆಕ್ಯೂರಿಟಿ ಮತ್ತು ಅಲೈಡ್ ಸರ್ವೀಸಸ್ ಸಂಸ್ಥೆಗೆ ಇ-ಟೆಂಡರ್ (E-tender) ನೀಡಲಾಗಿದೆ.
ದಾವಣಗೆರೆ: ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಕಚೇರಿ ಹಾಗೂ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳನ್ನು ಕಾಯಂ ಆಗಿ ಭರ್ತಿ ಮಾಡುವವರೆಗೆ ಅಥವಾ ಮುಂದಿನ ಆದೇಶದವರೆಗೆ ಪ್ರಾಂಶುಪಾಲರುಗಳು ತಮ್ಮ ಹಂತದಲ್ಲಿ ಯಾವುದೇ ರೀತಿಯ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಗ್ರೂಪ್-ಡಿ ಸಿಬ್ಬಂದಿ ಸೇವೆಯನ್ನು ನೇರ ಅಥವಾ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಈ ಆದೇಶ ಮೀರಿ ಕಾಲೇಜು ಹಂತದಲ್ಲಿ ನೇಮಿಸಿಕೊಂಡಲ್ಲಿ ತಗಲುವ ಆರ್ಥಿಕ ವೆಚ್ಚವನ್ನು ನೀಡುವುದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: ಬಸ್ ನಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಯತ್ನ; ಖಾಸಗಿ ಬಸ್ ಡ್ರೈವರ್, ಕಂಡಕ್ಟರ್, ಎಜೆಂಟ್ ಬಂಧನ
ಹೊರಗುತ್ತಿಗೆ ಸಿಬ್ಬಂದಿಯ ಇಪಿಎ ಮತ್ತು ಇಎಸ್‌ಐ ಖಾತೆಗಳಿಗೆ ನಿಯಮಾನುಸಾರ ಪ್ರತಿ ತಿಂಗಳು ವಂತಿಗೆಗಳನ್ನು ಜಮೆ ಮಾಡದೆ ಇದ್ದಲ್ಲಿ ಸಂಬಂಧಪಟ್ಟ ಏಜೆನ್ಸಿ ಮೂಲಕವೇ ಜಮೆ ಮಾಡಲು ಸೂಚಿಸಲಾಗಿದೆ.
ಹೊರಗುತ್ತಿಗೆ ನೌಕರರಿಗೆ ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ ಒಂದು ದಿನ ಮಾತ್ರ ಸಾಂದರ್ಭಿಕ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ 15 ದಿನಗಳಿಗಿಂತ ಹೆಚ್ಚಿನ ಸಮಯ ರಜೆ ಪಡೆದಲ್ಲಿ ಬದಲಿ ಸಿಬ್ಬಂದಿಯನ್ನು ನೇಮಿಸಬಹುದು ಎಂದು ತಿಳಿಸಲಾಗಿದೆ. ನಿಗದಿಪಡಿಸಿದ ಕಚೇರಿ/ಕಾಲೇಜಿನ ಕೆಲಸವನ್ನು ಹೊರತುಪಡಿಸಿ ಶೌಚಾಲಯ ಸ್ವಚ್ಛತೆ, ಸ್ವಂತ ಕೆಲಸಗಳಿಗೆ ಹಂಚಿಕೆ ಮಾಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.



