ಬೆಂಗಳೂರು: ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯುವತಿ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡುವುದಾಗಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ ಯುವತಿ, ನಾನು ಇಷ್ಟು ದಿನ ಭಯದಲ್ಲಿದ್ದೆ, ಈಗ ನನಗೆ ಧೈರ್ಯ ಬಂದಿದೆ. ಹೀಗಾಗಿ ನಮ್ಮ ವಕೀಲರಾದ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ಧೇನೆ ಎಂದು ಹೇಳಿಕೊಂಡಿದ್ದಾಳೆ.
ನಮ್ಮ ತಂದೆ-ತಾಯಿ ಆರ್ಶೀವಾದ, ರಾಜ್ಯ ಎಲ್ಲ ಪಕ್ಷ ಮತ್ತು ಸಂಘಟನೆಗಳ ಬೆಂಬಲದಿಂದ ದೂರು ನೀಡಲು ಮುಂದೆ ಬಂದಿದ್ದೇನೆ. ವಕೀಲ ಜಗದೀಶ್ ಜೊತೆ ದೂರು ನೀಡುತ್ತೇನೆ ಎಂಉ ಹೇಳಿಕೆ ನೀಡಿದ್ದಾಳೆ.



