Connect with us

Dvgsuddi Kannada | online news portal | Kannada news online

ಕರ್ನಾಟಕ ಬಜೆಟ್: ಅಂಗನವಾಡಿ, ಆಶಾ, ಗ್ರಾಮ ಸಹಾಯಕರ ಮಾಸಿಕ ಗೌರವ ಧನ ಹೆಚ್ಚಳ

ಪ್ರಮುಖ ಸುದ್ದಿ

ಕರ್ನಾಟಕ ಬಜೆಟ್: ಅಂಗನವಾಡಿ, ಆಶಾ, ಗ್ರಾಮ ಸಹಾಯಕರ ಮಾಸಿಕ ಗೌರವ ಧನ ಹೆಚ್ಚಳ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್​  ನಲ್ಲಿ ಅಂಗನವಾಡಿ, ಆಶಾ, ಗ್ರಾಮ ಸಹಾಯಕರ ಮಾಸಿಕ ಗೌರವಧನವನ್ನು ಒಂದು ಸಾವಿರ  ರೂಪಾಯಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವ ಧನ ಹೆಚ್ಚಳ ಮಾಡಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂಗಳು, ಬಿಸಿಯೂಟ ತಯಾರಿಕರಿಗೂ ತಲಾ 1000 ಗೌರವ ಧನ ಹೆಚ್ಚಳ ಮಾಡಲಾಗಿದೆ.

ಇದರ ಜತೆಗೆ, ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳ ಮಾಡಲಾಗಿದೆ. ಅವರ ಸೇವೆಗಳ ಅನುಭವದ ಆಧಾರದ ಮೇಲೆ 1000 ರೂಪಾಯಿಯಿಂದ 1500 ರೂಗಳ ಹೆಚ್ಚಳ ಮಾಡಲಾಗುವುದು. ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2000 ಪ್ರೋತ್ಸಾಹ ಗೌರವ ಧನ ನೀಡಲಾಗುವುದು ಎಂದಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top