Connect with us

Dvgsuddi Kannada | online news portal | Kannada news online

ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಹಣ ಹಂಚಿಕೆ..?

ಪ್ರಮುಖ ಸುದ್ದಿ

ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಹಣ ಹಂಚಿಕೆ..?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಇಂದು (ಮಾ. 04) ತಮ್ಮ ಮೊದಲ ಬಜೆಟ್ ಮಂಡಿಸಿದರು.  ಸಿಎಂ ಸಮುದಾಯವಾರು ಅನುದಾನ ಹಂಚಿಕೆ ವಿವರ  ಇಲ್ಲಿದೆ.

  • ಸಮುದಾಯವಾರು ಅನುದಾನ
  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ
  • ಮರಾಠ ಅಭಿವೃದ್ಧಿ ನಿಗಮದ ಮೂಲಕ 50 ಕೋಟಿ
  • ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ 10 ಕೋಟಿ
  • ಶಿವಶರಣೆ ನಲೂರು ನಿಂಬೆಕ್ಕರವರ ಜನ್ಮಸ್ಥಳ ಅಭಿವೃದ್ಧಿ
  • ಶ್ರೀಮಡಿವಾಳ ಮಾಚಿದೇವ ಮೂಲಸ್ಥಾನ ದೇವರಹಿಪ್ಪರಗಿಯನ್ನು ಅಭಿವೃದ್ದಿಗೊಳಿಸಿ ಸಾರ್ವಜನಿಕ ಯಾತ್ರಾ ಸ್ಥಳವನ್ನಾಗಿ ಮಾರ್ಪಡು
  • ಕುಂಬಾರ, ಯಾದವ, ದೇವಾಡಿಗ, ಸಿಂಪಿ, ಕ್ಷತ್ರೀಯ, ಮೇದಾರ, ಕುಂಚಿ, ಕುರ್ಮ, ಪಿಂಜಾರ, ನದಾಫ್, ಕುರುಬ, ಬಲಿಜ, ಈಡಿಗ, ಹಡಪದ ಹಾಗೂ ಇತರೆ ಜನಾಂಗದ ಅಭಿವೃದ್ಧಿಗೆ 400 ಕೋಟಿ
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು 5 ಕೋಟಿ
  • ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ 100 ವಿದ್ಯಾರ್ಥಿನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಿಸಲು 10 ಕೋಟಿ
  • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ
  • ಜೈನ್, ಸಿಖ್ ಮತ್ತು ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 50 ಕೋಟಿ
  • ಅಲ್ಪ ಸಂಖ್ಯಾತರ ಇಲಾಖೆಯಡಿ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ, ಹೂ ಮಾರಾಟಗಾರರು, ಸಣ್ಣಪುಟ್ಟ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆ ಹಾಗೂ ಆಟೋ ಚಾಲಕರಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸಹಯೋಗದೊಂದಿಗೆ ಆರ್ಥಿಕ ಸಹಾಯ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top