ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಜೆಟ್ ಗೆ ಎದ್ದು ನಿಲ್ಲುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎದ್ದು ನಿಂತು, ಇದೊಂದು ಅನೈತಿಕ ಸರ್ಕಾರ. ಈ ಬಾರಿಯ ಬಜೆಟ್ ನಾವು ಸಹಕಾರ ನೀಡಲ್ಲ. ಹೀಗಾಗಿ ಸಭಾ ತ್ಯಾಗ ಮಾಡುವುದಾಗಿ ಘೋಷಿಸಿದರು.
ಇದೊಂದು ನೈತಿಕತೆ ಕಳೆದುಕೊಂಡ ಸರ್ಕಾರ. ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್ ಮಂಡನೆಯಿಂದ ನಾವು ಸಭಾ ತ್ಯಾಗ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸದಸರು ಧ್ವನಿಗೂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷರು ಬಜೆಟ್ ವಿರೋಧಿಸುವುದು ಒಳ್ಳೆದಲ್ಲ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಮನವಿ ಮಾಡಿದರೂ ಘೋಷಣೆ ಕೂಗುತ್ತಾ ಕಾಂಗ್ರೆಸ್ ವಾಕ್ ಔಟ್ ಮಾಡಿತು.