ದಾವಣಗೆರೆ: ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ, ದ್ವಾರಕಾ ಯಾತ್ರೆ ಮತ್ತು ಪುರಿಜಗನ್ನಾಥ ದರ್ಶನ ಯಾತ್ರೆಗಳಿಗೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಇದಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ-ಸಿ ಅಧಿಸೂಚಿತ ದೇವಸ್ಥಾನಗಳಲ್ಲಿ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರನ್ನು ಉಚಿತವಾಗಿ ಕಳುಹಿಸಲು ಹಾಗೂ ಇದಕ್ಕೆ ತಗುಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ದಕ್ಷಿಣ ಕ್ಷೇತ್ರಗಳ ಯಾತ್ರಾ: ರಾಮೇಶ್ವರ-ಕನ್ಯಾಕುಮಾರಿ-ಮಧುರೈ-ತಿರುವನಂತಪುರ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಯಾತ್ರೆ ಜನವರಿ 25 ರಿಂದ ಜನವರಿ 30ರವರೆಗೆ ಇರಲಿದೆ. ಪ್ಯಾಕೇಜ್‌ಗೆ ಒಟ್ಟು ರೂ. 25,000/- ಗಳು ತಗುಲಲಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಅಂದಾಜು ರೂ. 10,000/- ಗಳನ್ನು ಭರಿಸಲಾಗುವುದು. ಇದರಲ್ಲಿ ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ ರೂ. 5,000/-ಗಳು ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ರೂ. 10,000/-ಗಳನ್ನು ಮಾತ್ರ ಪಾವತಿಸಬೇಕಾಗಿರುತ್ತದೆ.
ರೈಲು ಹತ್ತುವ ಮತ್ತು ಇಳಿಯುವ ಸ್ಥಳ: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.
ದ್ವಾರಕಾ ಯಾತ್ರೆ: ದ್ವಾರಕಾ-ನಾಗೇಶ್ವರ-ಸೋಮನಾಥ-ತ್ರಯಂಬಕೇಶ್ವರ ಕ್ಷೇತ್ರಗಳನ್ನು ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಜನವರಿ 6ರಂದು ದ್ವಾರಕ ಯಾತ್ರೆ ಹೊರಡಲಿದ್ದು, ಜನವರಿ 13ರಂದು ಮುಗಿಯಲಿದೆ.
ಪುರಿ ಜಗನ್ನಾಥ ದರ್ಶನ: ಪುರಿ-ಕೊನಾರ್ಕ್-ಗಂಗಾಸಾಗರ್- ಕೊಲ್ಕತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್.ಜನವರಿ 3ರಂದು ರೈಲು ಹೊರಡಲಿದ್ದು, ಫೆಬ್ರವರಿ 10ರಂದು ಮುಗಿಯಲಿದೆ.ಈ ಪ್ಯಾಕೇಜ್‌ಗೆ ಒಟ್ಟು ರೂ. 32,500/-ಗಳು ತಗುಲಲಿದ್ದು, ಕರ್ನಾಟಕ ಸರ್ಕಾರದಿಂದ ರೂ. 17,500/-ಗಳನ್ನು ಭರಿಸಲಾಗುತ್ತದೆ. ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ ರೂ. 7,500/-ಗಳು ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ರೂ. 15,000/-ಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.
ರೈಲು ಹತ್ತುವ ಮತ್ತು ಇಳಿಯುವ ಸ್ಥಳ : ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು.
ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಪ್ಯಾಕೇಜಿನಲ್ಲಿ 3 ಟೈರ್ ಎ.ಸಿ.ರೈಲಿನಲ್ಲಿ ಪ್ರಯಾಣ, ಊಟ ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕಿಐ ಸಹಾಯ ವ್ಯವಸ್ಥೆ ಇರುತ್ತದೆ.ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮುಜರಾಯಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.