Connect with us

Dvgsuddi Kannada | online news portal | Kannada news online

ಬಿಲ್ವಪತ್ರೆ ಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ..!

ಪ್ರಮುಖ ಸುದ್ದಿ

ಬಿಲ್ವಪತ್ರೆ ಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ..!

ಬಿಲ್ವಪತ್ರೆ  ಶಿವಪೂಜೆಗೆ ಉಪಯೋಗಿಸುವುದನ್ನು ನೋಡಿದ್ದೇವೆ. ಆದರೆ ಬಿಲ್ವಪತ್ರೆ  ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮವಾದ ಔಷಧಿ. ಅದರಲ್ಲೂ ಬೇಸಿಗೆ ಕಾಲದಲ್ಲಿ ಈ ಹಣ್ಣಿನ ಸೇವನೆ ಉತ್ತಮ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಗ್ಯಾಸ್ಟ್ರಿಕ್, ಅಲ್ಸರ್, ಮೂತ್ರಪಿಂಡದ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿದ್ದರೆ ಈ ಹಣ್ಣನ್ನು ತಿನ್ನಬಹುದು.

ಇದೊಂದು ಶಕ್ತಿ ವರ್ಧಕ  ಪಾನೀಯವಾಗಿಯೂ  ಬಳಸುತ್ತಾರೆ. ತೂಕ ಇಳಿಸಲು ಬಯಸುವವರು ಈ ಹಣ್ಣನ್ನು ನಿಶ್ಚಿಂತೆಯಿಂದ ಸೇವಿಸಬಹುದು. ಅಧಿಕ ಪ್ರೊಟೀನ್ ಅಂಶ ಹೊಂದಿರುವ ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಇಷ್ಟೆಲ್ಲಾ ಅದ್ಭುತ ಗುಣಗಳನ್ನು ಹೊಂದಿರುವ ಈ ಹಣ್ಣಿನ ಜ್ಯೂಸ್ ಮಾಡುವುದು ಕೂಡ ತುಂಬಾ ಸಿಂಪಲ್.

ಜ್ಯೂಸ್ ಮಾಡುವ ವಿಧಾನ :4-5 ಬಲಿತ ಬಿಲ್ವಪತ್ರೆ ಹಣ್ಣಿನ ಸಿಪ್ಪೆಯನ್ನು ತೆಗೆದು ಅದರ ತಿರುಳನ್ನು ತೆಗೆಯಿರಿ. ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕಿವುಚಿ. ನಂತರ ಜ್ಯೂಸನ್ನು ಸೋಸಬೇಕು.
ಹೀಗೆ ಎರಡು ಮೂರು ಬಾರಿ ಈ ರೀತಿ ಸಂಪೂರ್ಣವಾಗಿ ಹಣ್ಣಿನ ರಸವನ್ನು ತೆಗೆಯಬೇಕು. ನಂತರ ಸಕ್ಕರೆ ಬೆರೆಸಿ. ಬೇಕಿದ್ದರೆ ಉಪ್ಪು ಹಾಗೂ ಕಾಳುಮೆಣಸಿನಪುಡಿಯನ್ನು ಹಾಕಿ ಜ್ಯೂಸ್ ಸೇವಿಸಬಹುದು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});