Connect with us

Dvgsuddi Kannada | online news portal | Kannada news online

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ; ತಂದೆಯಂತೆ ನೇತ್ರದಾನ ದಾನ

ಪ್ರಮುಖ ಸುದ್ದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ; ತಂದೆಯಂತೆ ನೇತ್ರದಾನ ದಾನ

ಬೆಂಗಳೂರು: ಜಿಮ್ ನಲ್ಲಿ ವರ್ಕ್ ಮಾಡುವಾಗಲೇ ಕೇವಲ 46ನೇ ವಯಸ್ಸಿನಲ್ಲಿಯೇ ಜೀವನ ಪಯಣ ಮುಗಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ತಂದೆ ವರನಟ ರಾಜ್ ಕುಮಾರ್ ಅವರಂತೆ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ.

ಪುನೀತ್ ನಿಧನ ದೊಡ್ಡ‌ ಮನೆಗೆ ಬರಸಿಡಿನ ಆಘಾತ ನೀಡಿದ್ದು, ಇಡೀ ಕುಟುಂಬ ಮಾತ್ರವಲ್ಲದೆ, ಸ್ಯಾಂಡಲ್ ವುಡ್ ಪವರ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿ ನಂಬಲು ಸಾಧ್ಯವಾದ ಸಂಗತಿಯಾಗಿದೆ.

ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿನ ನಂತರ ತಂದೆ ಡಾ.ರಾಜ್ ಕುಮಾರ್ ಅವರಂತೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ನೇತ್ರದಾನ ಮಾಡಿದ್ದಾರೆ. ಪುನೀತ್ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು,  ತಮ್ಮ ಎರಡೂ ಕಣ್ಣುಗಳನ್ನು ಇನ್ನಿಬ್ಬರಿಗೆ ನೀಡಿದ್ದು ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top