Connect with us

Dvgsuddi Kannada | online news portal | Kannada news online

ಬಿಎಂಟಿಸಿಯಲ್ಲಿ ನೇರ ನೇಮಕಾತಿ ಮೂಲಕ 636 ಅಪ್ರೆಂಟಿಸ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಬಿಎಂಟಿಸಿಯಲ್ಲಿ ನೇರ ನೇಮಕಾತಿ ಮೂಲಕ 636 ಅಪ್ರೆಂಟಿಸ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಒಟ್ಟು 636 ಅಪ್ರೆಂಟಿಸ್ ಹುದ್ದೆ ಭರ್ತಿ ಮಾಡಲಾಗುವುದು. SSLC, ಐಟಿಐ, ಡಿಪ್ಲೊಮಾ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

  • ಹುದ್ದೆ ವಿವರ
    ಫುಲ್ ಟೈಂ ಅಪ್ರೆಂಟಿಸ್- 550
    ಡಿಪ್ಲೊಮಾ ಅಪ್ರೆಂಟಿಸ್- 43
    ಗ್ರಾಜುಯೇಟ್ ಅಪ್ರೆಂಟಿಸ್- 43

ಅಭ್ಯರ್ಥಿಗಳು ಆಫ್​ಲೈನ್/ಪೋಸ್ಟ್​​​ ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ಮಾರ್ಚ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ: ಫುಲ್ ಟೈಂ ಅಪ್ರೆಂಟಿಸ್- ಎಸ್​ಎಸ್​ಎಲ್​ಸಿ, ಐಟಿಐ, ಡಿಪ್ಲೊಮಾ ಅಪ್ರೆಂಟಿಸ್- ಡಿಪ್ಲೊಮಾ, ಗ್ರಾಜುಯೇಟ್ ಅಪ್ರೆಂಟಿಸ್- ಎಂಜಿನಿಯರಿಂಗ್ ವಯೋಮಿತಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 15, 2023ಕ್ಕೆ ಕನಿಷ್ಠ 16 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

  • ವೇತನ:ಫುಲ್ ಟೈಂ ಅಪ್ರೆಂಟಿಸ್ – ₹ 6000-7000, ಡಿಪ್ಲೊಮಾ ಅಪ್ರೆಂಟಿಸ್- ಮಾಸಿಕ ₹ 8000, ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9000

ಆಯ್ಕೆ ಪ್ರಕ್ರಿಯೆ: ಮೆರಿಟ್ ಲಿಸ್ಟ್​ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ವಿಳಾಸ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಕಟ್ಟಡ, ಆಡಳಿತ ಇಲಾಖೆ, 5 ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕ ಬೆಂಗಳೂರು – 560027, ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/02/2023, ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 15, 2023.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top