Connect with us

Dvgsuddi Kannada | online news portal | Kannada news online

ಅಮೆರಿಕಾದ ವೈದ್ಯೆಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಭಾರತದ ವೈದ್ಯ..!

ಅಂತರಾಷ್ಟ್ರೀಯ ಸುದ್ದಿ

ಅಮೆರಿಕಾದ ವೈದ್ಯೆಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಭಾರತದ ವೈದ್ಯ..!

ವಾಷಿಂಗ್ಟನ್​: ಭಾರತೀಯ ಮೂಲದ ವೈದ್ಯರೊಬ್ಬರು ಗುಂಡು ಹಾರಿಸಿ ಮಹಿಳಾ ವೈದ್ಯಯನ್ನು  ಕೊಲೆ ಮಾಡಿದ್ದಲ್ಲದೆ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಅಮೆರಿಕದ ಟೆಕ್ಸಾಸ್​ನಲ್ಲಿ ನಡೆದಿದ್ದು,  ಭಾರತೀಯ ಮೂಲದ ಶಿಶುವೈದ್ಯ ಭರತ್​ ಕುಮಾರ್​ ನಾರುಮಂಚಿ (43)  ಈ ಕೃತ್ಯ ಎಸಗಿದ್ದಾರೆ.  ಇತ್ತೀಚೆಗಷ್ಟೇ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿದ್ದರ. ಅಲ್ಲದೆ, ಹೆಚ್ಚಿನ ದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಅಂದಿನಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು. ಭರತ್​ರನ್ನು ಅವರು ಕೆಲಸ ಮಾಡುವ ಆಸ್ಟಿನ್​ನಲ್ಲಿರುವ ಚಿಲ್ಡ್ರನ್​ ಮೆಡಿಕಲ್​ ಗ್ರೂಪ್​ ಹಾಸ್ಪಿಟಲ್​ನಲ್ಲಿ ದಾಖಲಿಸಲಾಗಿತ್ತು. ಭರತ್​ ಬಳಿ ಗನ್​ ಇರುವುದು ಆಸ್ಪತ್ರೆಯಲ್ಲಿ ಗೊತ್ತಾಗಿದೆ.

ಆಸ್ಪತ್ರೆಯಲ್ಲಿ ಸುಮಾರು 6 ಗಂಟೆಗಳ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿ ಭಯಭೀತಗೊಂಡ ಜನರು ಅಲ್ಲಿಂದ ಹೊರ ಬಂದಿದ್ದಾರೆ. ಆದರೆ, ಕ್ಯಾಥರಿನ್​ ಮೇಲೆ ಭರತ್​ ಗುಂಡು ಹಾರಿಸಿ ಕೊಂದಿದ್ದಾರೆ. ಇದಾದ ಬಳಿಕ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಕೊಲೆಗೆ ಕಾರಣ ಇನ್ನೂ ತಿಳಿದಿಲ್ಲ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

Advertisement

ದಾವಣಗೆರೆ

Advertisement
To Top