Connect with us

Dvgsuddi Kannada | online news portal | Kannada news online

ಈ ವರ್ಷವೂ ಉತ್ತಮ ಮುಂಗಾರು ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಪ್ರಮುಖ ಸುದ್ದಿ

ಈ ವರ್ಷವೂ ಉತ್ತಮ ಮುಂಗಾರು ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಈ ಬಾರಿ ಮುಂಗಾರು ಋತುವಿನಲ್ಲಿ ಎಲ್‌ ನಿನೋ ಕಾರಣದಿಂದಾಗಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಮುನ್ಸೂಚನೆ ನೀಡಿದ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಲ್‌ ನಿನೋ ಹೊರತಾಗಿಯೂ ದೇಶದಲ್ಲಿ ಪ್ರಸಕ್ತ ವರ್ಷ ವಾಡಿಕೆಯಷ್ಟು ಉತ್ತಮ ಮಳೆಯಾಗಲಿದೆ ಮುನ್ಸೂಚನೆ ನೀಡಿದೆ.

ದೇಶದ ಕೃಷಿ ಕ್ಷೇತ್ರ ಅದರಲ್ಲೂ ಮುಖ್ಯವಾಗಿ ಆಹಾರ ಬೆಳೆಗಳು ಮುಂಗಾರನ್ನೇ ಅವಲಂಬಿಸಿದ್ದು ಈ ವರದಿ ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಭಾರತೀಯ ಹವಾಮಾನ ಇಲಾಖೆ, ಪ್ರಸಕ್ತ ಮುಂಗಾರು ಅವಧಿಯಲ್ಲಿ ಎಲ್‌ ನಿನೋ ಕಾಣಿಸಿಕೊಂಡರೂ ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಸೆಪ್ಟಂಬರ್‌ ತಿಂಗಳಲ್ಲಿ ಎಲ್‌ ನಿನೋ, ನೈಋತ್ಯ ಮಾರುತಗಳ ಮೇಲೆ ಕೊಂಚ ಪ್ರಭಾವ ಬೀರಲಿದೆಯಾದರೂ ಬರ ಪರಿಸ್ಥಿತಿ ಸೃಷ್ಟಿಯಾಗಲಾರದು. ಮುಂಗಾರಿನ ದೀರ್ಘಾವಧಿಯ ಸರಾಸರಿ ಶೇ.87ರಷ್ಟಾಗಿದ್ದು ಈ ಬಾರಿ ಈ ಅವಧಿಯಲ್ಲಿ ಶೇ.96ರಷ್ಟು ಮಳೆಯಾಗಲಿದೆ ಎಂದು ಅಂದಾಜಿಸಿದೆ. ಈ ಬಾರಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಂಭಾವ್ಯತೆ ಶೇ.67ರಷ್ಟಿದೆ ಎಂದು ಇಲಾಖೆ ತಿಳಿಸಿದೆ.

ಈ ಬಾರಿ ಅತಿ ಹೆಚ್ಚು ತಾಪಮಾನದಿಂದ ಕಂಗೆಟ್ಟಿರುವ ದೇಶದ ರೈತರ ಮೊಗದಲ್ಲಿ ಐಎಂಡಿ ನೀಡಿರುವ ಈ ಮುನ್ಸೂಚನೆ ಆಶಾವಾದ ಮೂಡಿಸಿದೆ.ಸೋಮವಾರವಷ್ಟೇ ಸ್ಕೈಮೆಟ್‌ ಪ್ರಸಕ್ತ ವರ್ಷದ ಮುಂಗಾರಿನ ಕುರಿತಂತೆ ತನ್ನ ಮೊದಲ ಮುನ್ಸೂಚನೆಯನ್ನು ಬಿಡುಗಡೆ ಮಾಡಿ ಮುಂಗಾರು ಋತುವಿನಲ್ಲಿ ಎಲ್‌ ನಿನೋ ಪರಿಣಾಮವಾಗಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದ್ದು, ದೇಶದಲ್ಲಿ ಶೇ. 20ರಷ್ಟು ಬರಗಾಲ ಉಂಟಾಗುವ ಸಾಧ್ಯತೆ ಇದೆ ಎಂದಿತ್ತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top