ಚಿತ್ರದುರ್ಗ: ಬುಧವಾರ ಹೊಳಲ್ಕೆರೆ ಪಟ್ಟಣದ ಸರಕಾರಿ ಪ್ರಥಮ ಧರ್ಜೆ ಕಾಲೇಜಿನಲ್ಲಿ ನಡೆದ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಫಲಿತಾಂಶ ಹೊರಬಿದ್ದಿದೆ. ತಾಲೂಕಿನ ಒಟ್ಟು ೨೯ ಗ್ರಾಪಂಗಳಲ್ಲಿ ೪೯೩ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವರಲ್ಲಿ ೩೧ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ೪೬೨ ಸ್ಥಾನಗಳಿಗೆ ಮತದಾನ ನಡೆದಿತ್ತು. ಬುಧವಾರ ಬೆಳಗ್ಗೆ ೮ರಿಂದ ರಾತ್ರಿ ೯ರ ವರೆಗೆ ಮತ ಎಣಿಕೆ ಕಾರ್ಯ ನಡೆದಿದೆ. ೨ ಕ್ಷೇತ್ರಗಳಲ್ಲಿ ರೀ ಕೌಟಿಂಗ್, ೨ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳು ಸಮವಾದ ಮತಗಳು ಪಡೆದಿದ್ದರಿಂದ ಫಲಿತಾಂಶ ಪ್ರಕಟ ಮಾಡುವುದು ವಿಳಂಬವಾಗಿತ್ತು.
ಗೆಲುವಿನ ‘ಲಾಟರಿ’
ಆರ್. ನುಲೇನೂರು ಭಾಗ – ೧ರಲ್ಲಿ ಎಸ್ಸಿ ಪುರುಷ ಸ್ಥಾನದ ಇಬ್ಬರು ಅಭ್ಯರ್ಥಿಗಳು ೧೨೨ ಸಮವಾದ ಮತಗಳನ್ನು ಪಡೆದಿದ್ದರು. ಹೀಗಾಗಿ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಗೆ ಪತ್ರ ಬರೆಯಿಸಿಕೊಂಡು ಲಾಟರಿ ಮೂಲಕ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಅಂದನೂರು ಗ್ರಾಪಂ ವ್ಯಾಪ್ತಿ ಬಂಡೇಬೊಮ್ಮನಹಳ್ಳಿಯಲ್ಲು ಸಹ ಸಾಮಾನ್ಯ ಮಹಿಳಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ೩೯೬ ಸಮವಾದ ಮತಗಳನ್ನು ಪಡೆದಿದ್ದರು.
ಒಂದು ವೋಟ್‌ನಲ್ಲಿ ಸೋಲು
ರೀ-ಕೌಟಿಂಗ್‌ನಲ್ಲೂ ಸೋಲು
ಆಡನೂರು ಗ್ರಾಪಂ ವ್ಯಾಪ್ತಿ ಪಾಡಿಗಟ್ಟೆ ಕ್ಷೇತ್ರದ ಸಾಮಾನ್ಯ ಪುರುಷ ಸ್ಥಾನದ ದ್ಯಾಮಪ್ಪ ಟಿ. ಎಂಬುವವರು ೪೦೬ ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಎಚ್.ಆರ್. ಕೃಷ್ಣಮೂರ್ತಿ ವಿರುದ್ಧ ಕೇವಲ ಒಂದು ಮತಗಳ ಅಂತರದಿAದ ಸೋತಿದ್ದಾರೆ. ಬಿ.ದುರ್ಗ, ಕೋಟೆಹಾಳ್ ಕ್ಷೇತ್ರಗಳಲ್ಲಿ ಸಹ ಮೂರು ನಾಲ್ಕು ಮತಗಳ ಅಂತರದಿAದ ಅಭ್ಯರ್ಥಿಗಳು ಸೋತಿದ್ದು, ರೀಕೌಟಿಂಗ್ ಮಾಡಿದರು ಸಹ ಫಲಿತಾಂಶದಲ್ಲಿ ವ್ಯತ್ಯಾಸವಾಗಿಲ್ಲ.
ಗಂಡ-ಹೆAಡತಿ ಗೆಲುವು, ಸೊಸೆ ಎದುರು ಸೋತ ಅತ್ತೆ
ಗುಂಡೇರಿಯಲ್ಲಿ ಗಂಡ-ಹೆAಡತಿ ಪ್ರತ್ಯೇಕ ಸ್ಥಾನಗಳಿಗೆ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಬಿದರಕೆರೆ ಭಾಗ – ೧ರಲ್ಲಿ ಒಂದು ಸ್ಥಾನಕ್ಕೆ ಅತ್ತೆ ಮತ್ತು ಸೊಸೆ ಸ್ಪರ್ಧಿಸಿದ್ದು, ಅತ್ತೆ ಎದುರು ಸೊಸೆ ಗೆದ್ದಿದ್ದಾರೆ.
ಪಕ್ಷವಾರು ಬಲಾಬಲಾ
ಹೊಳಲ್ಕೆರೆ ತಾಲೂಕು
ಒಟ್ಟು ಗ್ರಾಮ ಪಂಚಾಯಿತಿಗಳು – ೨೯
ಒಟ್ಟು ಸ್ಥಾನಗಳು – ೪೯೩
ಅವಿರೋಧ ಆಯ್ಕೆ – ೩೧
ಬಿಜೆಪಿ – ೨೫೩
ಕಾಂಗ್ರೆಸ್ – ೨೧೧
ಇತರೆ – ೨೯
೨೯ ಗ್ರಾಪಂಗಳಿAದ ಪಕ್ಕಾ ಮಾಹಿತಿ ಕಲೆ ಹಾಕಿದ್ದೇವೆ. ೩೦೦ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಮ್ಮ ಸರಕಾರದ ಅವಧಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಿವೆ.
– ಎಚ್. ಆಂಜನೇಯ, ಮಾಜಿ ಸಚಿವರು