Connect with us

Dvgsuddi Kannada | online news portal | Kannada news online

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಮಸಾಜಿಸ್ಟ್ ತರಬೇತಿಗೆ ಅರ್ಜಿ ಆಹ್ವಾನ; ಡಿ.30 ಕಡೆಯ ದಿನ-ಮಾಸಿಕ 5 ಸಾವಿರ ಶಿಷ್ಯ ವೇತನ

ದಾವಣಗೆರೆ

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಮಸಾಜಿಸ್ಟ್ ತರಬೇತಿಗೆ ಅರ್ಜಿ ಆಹ್ವಾನ; ಡಿ.30 ಕಡೆಯ ದಿನ-ಮಾಸಿಕ 5 ಸಾವಿರ ಶಿಷ್ಯ ವೇತನ

ದಾವಣಗೆರೆ: ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಲ್ಲಿ 2023-24 ನೇ ಸಾಲಿನಲ್ಲಿ ಎರಡು ತಿಂಗಳುಗಳ ಮಸಾಜಿಸ್ಟ್ ತರಬೇತಿ ಕೋರ್ಸ್‍ಗೆ ಅರ್ಜಿಆಹ್ವಾನಿಸಲಾಗಿದೆ.

ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರುವ ಯುವಕ, ಯುವತಿಯರಿಗೆ 18 ರಿಂದ 35 ವರ್ಷದೊಳಗಿನ ಪ.ಜಾತಿ 20 ಮತ್ತು ಪ.ಪಂ ದ 20 ಫಲಾನುಭವಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಡಿ.30 ಕಡೆಯ ದಿನವಾಗಿರುತ್ತದೆ.

ತರಬೇತಿ ಅವಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎರಡು ತಿಂಗಳ ಕಾಲ ರೂ.5000/- ಶಿಷ್ಯ ವೇತನವನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ ಇವರ ಕಚೇರಿ ದೂ.ಸಂ: 08182-223230 ಅಥವಾ ಡಾ.ಪ್ರಶಾಂತ್ ಕೇಕುಡ, ಎಸ್‍ಸಿ, ಎಸ್‍ಪಿ ಮತ್ತು ಟಿಎಸ್‍ಪಿ ನೋಡಲ್ ಅಧಿಕಾರಿ ಸಂಪರ್ಕಿಸಬಹುದೆಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top