ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ರಾಜ್ಯ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ರಾಜ್ಯದ ಎ ಶ್ರೇಣಿ ದೇವಸ್ಥಾನಗಳಲ್ಲಿ ಇಂದು (ಆ.25) ಉಚಿತ ಸರಳ ಸಾಮೂಹಿಕ ವಿವಾಹಗಳು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ವಿವಾಹಗಳು ಉಚ್ಚoಗೆಮ್ಮನ ದೇವಸ್ಥಾನ ಆವರಣದಲ್ಲಿ ನಡೆದವು.
ಈ ಸರಳ ಸಾಮೂಹಿಕ ವಿವಾಹದಲ್ಲಿ 06 ಜೋಡಿಗಳು ನೂತನ ಜೀವನಕ್ಕೆ ಕಾಲಿಟ್ಟಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆವತಿಯಿಂದ 40ಸಾವಿರ ಮೌಲ್ಯದ ಒಂದು ಚಿನ್ನದ ತಾಳಿ,ಎರಡು ಚಿನ್ನದ ಗುಂಡು ಹಾಗೂ ಹೆಣ್ಣಿಗೆ ಹತ್ತು ಸಾವಿರ ಹಾಗೂ ವರ ನಿಗೆ ಐದು ಸಾವಿರ ಹಣವನ್ನು ನೀಡಲಾಗಿತು.
ವಿವಾಹದಲ್ಲಿ ಭಾಗವಹಿಸಿದ ಭಕ್ತರೂ ಹಾಗೂ ಸoಬಂದಿಗಳಿಗೆ ಅನ್ನ ದಾಸೋಹವನ್ನು ದೇವಸ್ಥಾನದಿಂದ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಸರ್ಕಾರದ ನಿರ್ದೇಶನದಂತೆ ಉಚಿತವಾಗಿ ಸಪ್ತಪದಿ ಸರಳ ವಿವಾಹವನ್ನು ಮಾಡಿದ್ದು ಇದರಿಂದ ತಂದೆ-ತಾಯಿಗಳು ಆರ್ಥಿಕ ಹೊರೆ ಕಡಿಮೆಯಾಗಲಿ ದೇವಿಯು ಎಲ್ಲರಿಗೂ ಸುಖ ಶಾಂತಿ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ, ಉಪಾಧ್ಯಕ್ಷರಾದ ರೇಣುಕಮ್ಮ,ಗ್ರಾಮ ಪಂಚಾಯಿತಿ ಸದಸ್ಯರಾದ ಮಾಡ್ರಳ್ಳಿ ಕೆಂಚ್ಚಪ್ಪ ,ಪಿ ಹಾಲೇಶ್,ಕೆ ಮಂಜಪ್ಪ,ಮಮತಾ,ಎಸ್ ನಿಂಗಮ್ಮ,ಸಿ ನಾಗಮ್ಮ,ಚಂಚಿ ಲಮ್ಮ,ರೇಣುಕಮ್ಮ, ಗ್ರಾಮದ ಮುಖಂಡರಾದ ಸಿ ಬರಮಪ್ಪ,ಶಿವಕುಮಾರ್ ಸ್ವಾಮಿ ,ಸಿ ಕೆಂಚ್ಚಪ್ಪ ಪರಸಪ್ಪ,ಸಿದ್ದನಗೌಡ ಅರ್ಚಕರಾದ ಕೆಂಚ್ಚಪ್ಪ ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು, ಭಕ್ತರೂ ಉಪಸ್ಥಿತರಿದ್ದರು.



