ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ 6 ಶಾಸಕರು ಬಿಜೆಪಿ ಪಕ್ಷದಿಂದ ಗೆದ್ದಿದ್ಧಾರೆ. ಆರು ಶಾಸಕರು ಸೇರಿ ಯಾರನ್ನಾದರೂ ಒಬ್ಬರನ್ನು ಸಚಿವ ಸ್ಥಾನಕ್ಕೆ ಸೂಚಿಸಿದರೆ, ನಾನು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬಹುದು. ಆದರೆ, 6 ಜನ ಮಂತ್ರಿ ಮಾಡಿ ಎಂದರೆ ಸಾಧ್ಯವಿಲ್ಲದ ಮಾತು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಚನ್ನಗಿರಿಯ ಶಾಂತಿಸಾಗರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ನನಗೆ ಆರು ಜನ ಶಾಸಕರೂ ಬೇಕು. ನಾನು ಇಂಥವರಿಗೆ ಕೊಡಿ ಎಂದು ಹೇಳಲ್ಲ. ಆರು ಶಾಸಕರು ಸೇರಿ ಒಬ್ಬರನ್ನು ಸೂಚಿಸಿ, ಆಗ ನಾನು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಸಚಿವ ಸ್ಥಾನ ಕೊಡಿಸಬಹುದು. ಈ ಬಗ್ಗೆ ಯಾರ ಮೆನೆಯಲ್ಲಿ ಚರ್ಚೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಚರ್ಚೆ ಮಾಡಿದವರನ್ನೇ ಕೇಳಿ. ನಾನು ಯಾರನ್ನು ಸೂಚಿಸಲ್ಲ ಎಂದರು.



