ಸೋಮವಾರ ಸುಮಾರು ಆರು ಗಂಟೆಗಳ ಕಾಲ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಡೌನ್ ಆಗಿತ್ತು. ಇದರಿಂದ ಬಳಕೆದಾರರು ತೊಂದರೆಗೆ ಸಿಲುಕಿದ್ದರು. ಹೆಚ್ಚಿನವರು ತಮ್ಮ ಫೋನ್ ನಲ್ಲಿಯೇ ಏನು ಆಗಿದೆ ಎಂದು ಫೋನ್ ಸ್ವೀಚ್ ಆಫ್ ಮಾಡದು ಆನ್ ಮಾಡದು, ಆ್ಯಪ್ ಅಪ್ಡೇಟ್ ಮಾಡದು ಮಾಡಿದ್ದು ಸಾಮಾನ್ಯವಾಗಿತ್ತು. ಆದರೆ ವಾಸ್ತವಾಗಿ ಸರ್ವರ್ ಡೌನ್ ಆಗಿದ್ದು, ಇದಕ್ಕೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಕ್ಷಮೆ ಕೇಳಿದ್ಧಾರೆ. ಇದರಿಂದ ಸಂಸ್ಥೆಗೆ ಎಷ್ಟು ನಷ್ಟ ಆಗಿದೆ ಗೊತ್ತೆ?.. ಬರೋಬ್ಬರಿ 44,713 ಕೋಟಿ ನಷ್ಟವಾಗಿದೆ.
ಜಾಗತಿಕ ವ್ಯತ್ಯಯವು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಅನ್ನು ಅಕ್ಟೋಬರ್ 4ರ ಸಂಜೆಯಿಂದ ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್ಬುಕ್ನ ಸ್ಥಾಪಕ ಮಾರ್ಕ್ ಝುಕರ್ಬರ್ಗ್ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 44,713 ಕೋಟಿ ನಷ್ಟ ಸಂಭವಿಸಿದೆ.
ರೂಟರ್ಸ್ ನಮ್ಮ ಡೇಟಾ ಸೆಂಟರ್ಗಳು ನೆಟ್ವರ್ಕ್ ಟ್ರಾಫಿಕ್ ಮಧ್ಯೆ ಕೋ ಆರ್ಡಿನೇಟ್ ಮಾಡುತ್ತದೆ. ಈ ಸಂವಹನಕ್ಕೆ ತಡೆಯಾಗಿದ್ದರಿಂದ ಸಮಸ್ಯೆ ಎದುರಾಯಿತು. ನೆಟ್ವರ್ಕ್ನ ದಟ್ಟಣೆಯ ಈ ತಡೆಯು ಡೇಟಾ ಸೆಂಟರ್ ಸಂವಹನದ ಮೇಲೆ ಪರಿಣಾಮ ಬೀರುವಂತೆ ಮಾಡಿ, ನಮ್ಮ ಸೇವೆ ನಿಂತುಹೋಯಿತು ಎಂದು ಫೇಸ್ಬುಕ್ ಬ್ಲಾಗ್ಪೋಸ್ಟ್ನಲ್ಲಿ ಮಾಹಿತಿ ನೀಡಿದೆ.